Wednesday, July 15, 2026
Homeಕರಾವಳಿಮಂಗಳೂರುಮಂಗಳೂರು; ತನ್ನ ಮದುವೆ ಆಮಂತ್ರಣ ಪತ್ರ ನೀಡಲು ಅಂತಾ ಹೋದ ಯುವಕ ನಾಪತ್ತೆ

ಮಂಗಳೂರು; ತನ್ನ ಮದುವೆ ಆಮಂತ್ರಣ ಪತ್ರ ನೀಡಲು ಅಂತಾ ಹೋದ ಯುವಕ ನಾಪತ್ತೆ

- Advertisement -
- Advertisement -

ಮಂಗಳೂರು; ತನ್ನ ಮದುವೆ ಆಮಂತ್ರಣ ಪತ್ರ ನೀಡಲು ಅಂತಾ ಹೋದ ಯುವಕ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ರಕ್ಷಣ್ ಜೆ.ಕೆ (32) ಕಾಣೆಯಾದ ಯುವಕ. ರಕ್ಷಣ್ ಡಿಸೆಂಬರ್ 6 ರಂದು ತನ್ನ ತಾಯಿಯ ಕಾರಿನಲ್ಲಿ ಹೊರಟು ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಮದುವೆಯ ಆಮಂತ್ರಣ ಪತ್ರ ನೀಡಿ ಬರುತ್ತೇನೆಂದು ಹೇಳಿ ಹೋದವರು ಕಾಣೆಯಾಗಿರುವ ಬಗ್ಗೆ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸೆಂಬರ್ 6 ರಂದು ರಾತ್ರಿ ರಕ್ಷಣ್ ಕಾರು 10:30 ಗಂಟೆಗೆ ನಗರದ ಟೌನ್‍ಹಾಲ್ ಬಳಿ ಕಾರು ಪತ್ತೆಯಾಗಿರುತ್ತದೆ.

ಯುವಕ ತನಗೆ ಮದುವೆ ಇಷ್ಟವಿಲ್ಲ ಎಂದು ಮನೆಯವರ ಬಳಿ ಹೇಳಿದ್ದರೂ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಶನಿವಾರ ಮನೆಯಿಂದ ತೆರಳಿದ್ದ ಅವರು ಮಧ್ಯಾಹ್ನದ ರೈಲಿನಲ್ಲಿ ಚೆನ್ನೈಗೆ ಹೋಗಿದ್ದಾರೆ. ಸೋಮವಾರ ಮೊಬೈಲ್‌ ಕರೆ ಸ್ವೀಕರಿಸಿದ್ದು, ತಾನು ಚೆನ್ನೈಯಲ್ಲಿರುವುದಾಗಿ ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಲೋಕೇಷನ್‌ ಸರ್ಚ್‌ ಮಾಡಿದಾಗ ಚೆನ್ನೈಯಲ್ಲಿರುವುದು ದೃಢಪಟ್ಟಿದೆ. ಮರಳಿ ಮಂಗಳೂರಿಗೆ ಕರೆತರುವ ಪ್ರಯತ್ನ ನಡೆಯುತ್ತಿದೆ.

- Advertisement -

Latest News

error: Content is protected !!