Saturday, June 6, 2026
Homeಕರಾವಳಿಕೊಟ್ಟಿಗೆಹಾರ: ದೇವರ ಮನೆ ಪ್ರವಾಸಕ್ಕೆ ಹೋದ ಬೆಳ್ತಂಗಡಿಯ ಯುವಕ ನಾಪತ್ತೆ ; ಅನುಮಾನಕ್ಕೆ ಕಾರಣವಾಗಿದೆ ಗೆಳೆಯರ...

ಕೊಟ್ಟಿಗೆಹಾರ: ದೇವರ ಮನೆ ಪ್ರವಾಸಕ್ಕೆ ಹೋದ ಬೆಳ್ತಂಗಡಿಯ ಯುವಕ ನಾಪತ್ತೆ ; ಅನುಮಾನಕ್ಕೆ ಕಾರಣವಾಗಿದೆ ಗೆಳೆಯರ ಜೊತೆ ನಡೆದ ಗಲಾಟೆ

- Advertisement -
- Advertisement -

ಕೊಟ್ಟಿಗೆಹಾರ : ಮೂಡಿಗೆರೆ ತಾಲೂಕಿನ ಐತಿಹಾಸಿಕ ಹಾಗೂ ಪ್ರವಾಸಿ ತಾಣ ದೇವರ ಮನೆ ಪ್ರವಾಸಕ್ಕೆ ಬಂದಿದ್ದ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದೀಕ್ಷಿತ್ (27) ಅಕ್ಟೋಬರ್ 10 ರಂದು ಮಂಗಳವಾರ ಸಂಜೆ ನಾಪತ್ತೆಯಾಗಿದ್ದು ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದರು ಈ ವರೆಗೆ ಪತ್ತೆಯಾಗಿಲ್ಲ.

ಬೆಳ್ತಂಗಡಿ ತಾಲೂಕಿನಿಂದ ನಾಲ್ಕು ಯುವಕರ ತಂಡ ದೇವರಮನೆಗೆ ಪ್ರವಾಸಕ್ಕೆ ಬಂದಿದ್ದು ಪ್ರವಾಸ ಮುಗಿಸಿ ಹಿಂದಿರುಗುವಾಗ ಯುವಕರ ಮಧ್ಯದಲ್ಲಿ ಗಲಾಟೆ ನಡೆದಿತ್ತು. ನಂತರ‌ ಕೋಪದಿಂದ ಬೇರೆಯಾಗಿ ಹೋದ ಎನ್ನಲಾಗಿದೆ. ದೇವರ ಮನೆ ಸುತ್ತಮುತ್ತ ಮಂಜು ಕವಿದಿದ್ದರಿಂದ ಹುಡುಕಾಟಕ್ಕೆ ಅಡಚಣೆಯಾಗಿದ್ದು ಇಂದು ಕಾರ್ಯಾಚರಣೆ ಮುಂದುವರೆದಿದೆ. ಯುವಕ ನಾಪತ್ತೆ ಪ್ರಕರಣ ಅನುಮಾನ ಮೂಡಿಸಿದೆ.

- Advertisement -

Latest News

error: Content is protected !!