Monday, May 6, 2024
Homeಕರಾವಳಿಮಂಗಳೂರುಉಪ್ಪಿನಂಗಡಿ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಜೊತೆ ಸಹ ಪ್ರಯಾಣಿಕನಿಂದ ಅನುಚಿತ ವರ್ತನೆ; ಉಪ್ಪಿನಂಗಡಿ ಠಾಣೆಯಲ್ಲಿ...

ಉಪ್ಪಿನಂಗಡಿ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಜೊತೆ ಸಹ ಪ್ರಯಾಣಿಕನಿಂದ ಅನುಚಿತ ವರ್ತನೆ; ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲು

spot_img
- Advertisement -
- Advertisement -

ಉಪ್ಪಿನಂಗಡಿ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಜೊತೆ ಸಹ ಪ್ರಯಾಣಿಕ ಅನುಚಿತವಾಗಿ ವರ್ತಿಸಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ ಘಟನೆ ನಡೆದಿದೆ.

ದಿನಾಂಕ 24-04-2024 ರಂದು ದೂರುದಾರ ಯುವತಿ, ಬೆಂಗಳೂರಿನಿಂದ ತನ್ನ ಮನೆಯಾದ ಫರಂಗಿಪೇಟೆಗೆ, ಕೆಎ-51 ಎಡಿ-7116 ನೇ ನೋಂದಣಿಯ ಬಸ್ಸಿನಲ್ಲಿ  ಪ್ರಯಾಣಿಸುತ್ತಿದ್ದಾಗ,  ಬೆಳಗ್ಗಿನ ಜಾವ ಬಸ್ ಗುಂಡ್ಯ ಬಳಿ ತಲುಪುತ್ತಿದ್ದಂತೆ, ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಹಪ್ರಯಾಣಿಕನೋರ್ವ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುತ್ತಾನೆ . ಈ ಬಗ್ಗೆ ಯುವತಿ ಉಪ್ಪಿನಂಗಡಿ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ, ಅ. ಕ್ರ. 46/2024 ಕಲಂ 354,354(A) Ipc ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಪೊಲೀಸರು ಭರವಸೆ ನೀಡಿದ್ದಾರೆ.

ಇನ್ನು ಈ ಬಗ್ಗೆ ರಾಜಕೀಯ ಲಾಭಕ್ಕಾಗಿ,ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಕಂಡುಬಂದಿದ್ದು, ಇದು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿರುತ್ತದೆ ಹಾಗೂ ಇಂತಹ ಸುಳ್ಳುಸುದ್ದಿಗಳಿಂದ  ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವುದರಿಂದ, ಅಂತಹ ಕಿಡಿಗೇಡಿಗಳ ವಿರುದ್ದವೂ ಸೂಕ್ತ ಕಾನುನುಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದಾಗಿ ವಿನಂತಿಸಲಾಗಿದೆ.

- Advertisement -
spot_img

Latest News

error: Content is protected !!