Wednesday, April 16, 2025
Homeಉತ್ತರ ಕನ್ನಡಕಾರವಾರ: ಪ್ರೀತಿಸಿದಾಕೆ ಕೈ ತಪ್ಪಿದ್ದಕ್ಕೆ ಆಕೆಯ ಗಂಡನನ್ನು ಕೊಂದ ಪಾಗಲ್ ಪ್ರೇಮಿ

ಕಾರವಾರ: ಪ್ರೀತಿಸಿದಾಕೆ ಕೈ ತಪ್ಪಿದ್ದಕ್ಕೆ ಆಕೆಯ ಗಂಡನನ್ನು ಕೊಂದ ಪಾಗಲ್ ಪ್ರೇಮಿ

spot_img
- Advertisement -
- Advertisement -

ಕಾರವಾರ: ಪ್ರೀತಿಸಿದಾಕೆ ಕೈ ತಪ್ಪಿದ್ದಕ್ಕೆ ಆಕೆಯ ಗಂಡನನ್ನು ಪಾಗಲ್ ಪ್ರೇಮಿಯೊಬ್ಬ ಕೊಲೆ ಮಾಡಿರುವ ಘಟನೆ ಶಿರಸಿಯಲ್ಲಿ ನಡೆದಿದೆ. ಪ್ರೀತಮ್ ಡಿಸೋಜ ಕೊಲೆಗೈದ ಆರೋಪಿ. ಗಂಗಾಧರ್ ಕೊಲೆಯಾದ ಯುವಕ.

ಪ್ರೀತಮ್ ಶಿರಸಿ ಮೂಲದ ಪೂಜಾ ಎಂಬಾಕೆಯನ್ನು ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದ. ಇಬ್ಬರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳೋದಕ್ಕೂ ಮುಂದಾಗಿದ್ದರು.  ಆದರೆ ಪ್ರೀತಮ್ ಗೆ ಒಂದು ಲವ್ ಅಫೆರ್ ಇರುವುದು ಪೂಜಾಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡಿದ್ದ ಪೂಜಾ ಶಿರಸಿ ಬಿಟ್ಟು ಬೆಂಗಳೂರಿಗೆ ಹೋಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.

ಬೆಂಗಳೂರಿಗೆ ಹೋದಾಗ ಪರಿಚಯವಾದ ಸಾಗರ ತಾಲೂಕಿನ ನೀಚಡಿಯ ಗಂಗಾಧರ್ ಎಂಬಾತನನ್ನು ಮದುವೆಯಾಲು ನಿರ್ಧರಿಸಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಮದುವೆ ಕೂಡ ಆಗಿತ್ತು. ಆದ್ರೆ, ಇತ್ತ ಆಕ್ರೋಶಗೊಂಡಿದ್ದ ಪ್ರೀತಮ್, ಪೂಜಾಳ ಗಂಡನನ್ನೇ ಕೊಲೆ ಮಾಡಿದ್ದಾನೆ. ಶಿರಸಿಯಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್ಆರ್ ಟಿಸಿ ಬಸ್ ನಲ್ಲಿ ಪ್ರೀತಮ್ ಗಂಗಾಧರ ಜೊತೆ ಗಲಾಟೆ ಮಾಡಿಕೊಂಡಿದ್ದು, ತನ್ನ ಜೇಬಿನಲ್ಲಿದ್ದ ಚಾಕುವಿನಿಂದ ಗಂಗಾಧರ್ ಗೆ ಇರಿದು ಕೊಲೆ ಮಾಡಿ, ಪರಾರಿಯಾಗಿದ್ದಾನೆ.


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಕೊಲೆ ಆದವನ ಪತ್ನಿ ಪೂಜಾಳನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ವಿಚಾರಣೆ ವೇಳೆ ಕೊಲೆ ಮಾಡಿದವನ ಹೆಸರು ಊರು ಎಲ್ಲ ಮಾಹಿತಿ ತಾನಾಗಿಯೇ ಹೇಳಿದ್ದಾಳೆ‌. ಕೂಡಲೇ ನಾಕಾಬಂಧಿ ಮಾಡಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಳಿಕ ಕೊಲೆ ಆರೋಪಿ ಮತ್ತು ಆತನ ಪ್ರಿಯತಮೆಯನ್ನು ಪೊಲೀಸರ ವಿಚಾರಣೆ ನಡೆಸಿದಾಗ, ಎಲ್ಲಾ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ 10 ವರ್ಷದ ಪ್ರೀತಿ ಬಗ್ಗೆ ಬಾಯಿಬಿಟ್ಟ ಇಬ್ಬರು, ಗಲಾಟೆ ಬಳಿಕ ಬೇರೆ ಮದುವೆಯಾದರೂ ಮತ್ತೆ ಪೂಜಾ ಹಳೆಯ ಪ್ರೇಮಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಈ ವೇಳೆ ನಮ್ಮಿಬ್ಬರ ಪ್ರೀತಿಗೆ ಗಂಗಾಧರ ಅಡ್ಡಿ ಆಗಿರುವುದು ಇಬ್ಬರಿಗೂ ಸಹಿಸುವುದಕ್ಕೆ ಆಗಿಲ್ಲ. ಹಾಗಾಗಿ ನಿನ್ನೆ ಶಿರಸಿಯಲ್ಲಿದ್ದ ಗಂಗಾಧರ ಅಕ್ಕಳ ಮನೆಯ ಕಾರ್ಯಕ್ರಮದ ನಿಮಿತ್ತ, ಪತ್ನಿಯ ಜೊತೆಗೆ ಅಕ್ಕನ ಮನೆಗೆ ಬಂದಿದ್ದ ಗಂಗಾಧರ, ಕಾರ್ಯಕ್ರಮ ಮುಗಿಸಿ ಶಿರಸಿಯಿಂದ ಬೆಂಗಳೂರು ಬಸ್ ಹತ್ತಿ ಹೊಗುತ್ತಿದ್ದ. ಈ ವೇಳೆ ಬಸ್ ಹತ್ತಿದ ಪ್ರೀತಂ ಜಗಳ ಮಾಡಿಕೊಂಡು ಗಂಗಾಧರ ಎದೆಗೆ ಚಾಕುವಿನಿಂದ ಚುಚ್ಚಿದ್ದಾನೆ.

ಇಬ್ಬರ ನಡುವಿನ ಪ್ರೀತಿ ಮತ್ತು ವೈಮನಸ್ಸಿಗೆ ಒಂದು ಅಮಾಯಕ ಜೀವ ಬಲಿಯಾಗಿದೆ. ಸದ್ಯ ಪ್ರೇಮಿಗಳು ಜೈಲು ಕಂಬಿ ಎಣಿಸುತ್ತಿದ್ದಾರೆ..

- Advertisement -
spot_img

Latest News

error: Content is protected !!