ಮಂಗಳೂರು; ಕಾಸ್ಮೆಟಿಕ್ ಸರ್ಜರಿಯ ಬಳಿಕ ಯುವಕ ಸಾವನ್ನಪ್ಪಿರುವ ಘಟನೆ ಕಂಕನಾಡಿಯ ಬೊಂದರ್ ವೆಲ್ ನಲ್ಲಿ ನಡೆದಿದೆ. ಉಳ್ಳಾಲದ ಅಕ್ಕರೆಕೆರೆ ನಿವಾಸಿಯಾದ ಮೊಹಮ್ಮದ್ ಮಾಝಿನ್ (32) ಮೃತ ಯುವಕ.
ಮಾಝೀನ್ ಅವರು ತನ್ನ ಎದೆಯ ಎಡಭಾಗದಲ್ಲಿದ್ದ ಸಣ್ಣ ಗುಳ್ಳೆಯನ್ನು ತೆಗೆಸಲು ಬೆಂದೂರ್ ವೆಲ್‌ನಲ್ಲಿರುವ ಫ್ಲೋಂಟ್ ಕಾಸ್ಕೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪರೆಂಟ್ ಕ್ಲಿನಿಕ್ ಗೆ ಬಂದಿದ್ದರು. ಅದರಂತೆ ಅರ್ಧ ಗಂಟೆಯಲ್ಲಿ ಮುಗಿಯಬಹುದಾಗಿದ್ದ ಸಣ್ಣ ಶಸ್ತ್ರಚಿಕಿತ್ಸೆ, ಸಂಜೆಯಾದರೂ ಮುಗಿದಿಲ್ಲ. ಇದರಿಂದ ಅನುಮಾನಗೊಂಡ ಮಾಝಿನ್ ಮನೆಯವರು ವಿಚಾರಿಸಿದ್ದಾರೆ. ಆಗ ಆರೋಗ್ಯದಲ್ಲಿ ಏರುಪೇರು ಆಗಿರುವ ಮಾಹಿತಿ ಗೊತ್ತಾಗಿದೆ.
ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಮಾಝಿನ್ ರನ್ನು ದಾಖಲು ಮಾಡಿದ್ದಾರೆ. ಬಳಿಕ ಪರೀಕ್ಷಿಸಿದ ವೈದ್ಯರು ಮಾಝಿನ್ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಸರ್ಜರಿಯ ವೇಳೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆಂದು ಮನೆಯವರು ಆರೋಪಿಸಿದ್ದಾರೆ., ಈ ಕುರಿತು ಕದ್ರಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಾಗಿದೆ.