- Advertisement -
- Advertisement -
ಬಂಟ್ವಾಳ; ಬೈಕ್ ಮತ್ತು ಟೆಂಪೊ ನಡುವೆ ಅಪಘಾತ ಸಂಭವಿಸಿ ಸುಳ್ಯದ ಯುವಕ ಸಾವನ್ನಪ್ಪಿರುವ ಘಟನೆ ಸೂರಿಕುಮೇರು ಜಂಕ್ಷನ್ ನಲ್ಲಿ ನಡೆದಿದೆ.
ಸುಳ್ಯ ನಿವಾಸಿ, ಸೂರಿಕುಮೇರು ಸಮೀಪದ ಕೋಸ್ಟಲ್ ಕೋಳಿ ಫಾರ್ಮ್ ಕೆಲಸಗಾರ ಪುನೀತ್ ಮೃತ ಯುವಕ. ಪುನೀತ್ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ಮಾಣಿಯ ಆಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಟ್ಲ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ.
- Advertisement -