Sunday, June 7, 2026
Homeಕರಾವಳಿಬಂಟ್ವಾಳ; ರಾತ್ರಿ ಊಟ ಮಾಡಿ ಮಲಗಿದ್ದ ಯುವಕ ಅಲ್ಲೇ ಸಾವು

ಬಂಟ್ವಾಳ; ರಾತ್ರಿ ಊಟ ಮಾಡಿ ಮಲಗಿದ್ದ ಯುವಕ ಅಲ್ಲೇ ಸಾವು

- Advertisement -
- Advertisement -

ಬಂಟ್ವಾಳ; ರಾತ್ರಿ ಊಟ ಮಾಡಿ ಮಲಗಿದ್ದ ಯುವಕ ಮಲಗಿದ್ದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಲೊರೆಟ್ಟೋ ಎಂಬಲ್ಲಿ ನಡೆದಿದೆ.ಧೀರಜ್ ಮೃತ ಯುವಕ.

ಧೀರಜ್  ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಧೀರಜ್ ಗುರುವಾರ ರಾತ್ರಿ ಊಟ ಮಾಡಿ ಮಲಗಿದ್ದರು.ಶುಕ್ರವಾರ ಬೆಳಗ್ಗೆ ಅವರನ್ನು ಎಬ್ಬಿಸುವಾಗ ಅವರು ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು ಎನ್ನಲಾಗಿದೆ.

ಈ ಕುರಿತು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಹಿರಂಗವಾಗಿದೆ. ಮೃತರು ಅವಿವಾಹಿತರಾಗಿದ್ದರು.

- Advertisement -

Latest News

error: Content is protected !!