Friday, June 5, 2026
Homeಕರಾವಳಿಉಡುಪಿಕಾರ್ಕಳ: ಸಾಲ ತೀರಿಸಲಾಗದೇ ಯುವಕ ಆತ್ಮಹತ್ಯೆಗೆ ಶರಣು

ಕಾರ್ಕಳ: ಸಾಲ ತೀರಿಸಲಾಗದೇ ಯುವಕ ಆತ್ಮಹತ್ಯೆಗೆ ಶರಣು

- Advertisement -
- Advertisement -

ಕಾರ್ಕಳ: ಸಾಲ ತೀರಿಸಲಾಗದೇ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ನಿತ್ಯಾನಂದ (26)  ಮೃತ ದುರ್ದೈವಿ.

ನಿತ್ಯಾನಂದ ಕಾರ್ಕಳ ಕೆ.ಇ.ಬಿ.ಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದು, ದಿನಾಂಕ 17/05/2025 ರಂದು ಬೆಳಿಗ್ಗೆ 7:30 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಬೈಕ್‌ನಲ್ಲಿ ಹೋದವರು ವಾಪಾಸ್ ಬಂದಿರಲಿಲ್ಲ, ಅವರನ್ನು ಹುಡುಕಾಡಿದಾಗ ಮನೆಯ ಸಮೀಪ ತಿರುಮಲಬೆಟ್ಟು ದಿವಾಕರ ಹಾಗೂ ಅವರ ಕುಟುಂಬದವರಿಗೆ ಸೇರಿದ ರಬ್ಬರ್‌ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ. ಇನ್ನು ಮೃತ ನಿತ್ಯಾನಂದ ಸಾಲವನ್ನು ಮಾಡಿ ಹಣ ಪಡೆದುಕೊಂಡಿದ್ದು, ಸಾಲ ಮರುಪಾವತಿಸಲು ಸಾಧ್ಯವಾಗದೆ ಇದ್ದು, ಇದೇ ಕಾರಣದಿಂದ ಜೀವನದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!