Friday, June 5, 2026
Homeಕರಾವಳಿಸುಳ್ಯ:ಅರಂತೋಡಿನಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸುಳ್ಯ:ಅರಂತೋಡಿನಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಅರಂತೋಡು: ಯುವಕನೊಬ್ಬ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಂತೋಡಿನಲ್ಲಿ ನಡೆದಿದೆ.  ಹೊನ್ನಪ್ಪ ಮಡಿವಾಳ ಅವರ ಪುತ್ರ ಕೇಶವ(33)  ಆತ್ಮಹತ್ಯೆ ಮಾಡಿಕೊಂಡವರು.

ಶನಿವಾರಮನೆಯವರೆಲ್ಲಾ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳಿದ್ದು, ಕೇಶವ ಅವರು ಮಾತ್ರ ಮನೆಯಲ್ಲಿದ್ದರು.ತಾಯಿ ರಾತ್ರಿ ಕರೆ ಮಾಡಿದಾಗ ತಾನು ನೆಂಟರ ಮನೆಗೆ ಹೋಗುವುದಾಗಿ ತಿಳಿಸಿದ್ದರೆನ್ನಲಾಗಿದೆ. ದೇವಸ್ಥಾನಕ್ಕೆ ತೆರಳಿದ್ದವರು ರವಿವಾರ ಬೆಳಗ್ಗೆ ಮನೆಗೆ ಬಂದು ಬಾಗಿಲು ತೆರೆದು ನೋಡಿದಾಗ ಕೇಶವ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಅವಿವಾಹಿತರಾಗಿರುವ ಅವರು ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು ಮನೆಯಿಂದ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಯುವಕನ ಡೆತ್‌ನೋಟ್‌ ದೊರೆತಿದ್ದು ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೃತರು ತಂದೆ, ತಾಯಿ, ಸಹೋದರಿ, ಸಹೋದರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!