Thursday, June 4, 2026
Homeಕರಾವಳಿಪ್ರೇಮ ವೈಫಲ್ಯ ಹಿನ್ನೆಲೆ: ಕೊಣಾಜೆಯಲ್ಲಿ ಶಾಲಾ ಆವರಣದಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ

ಪ್ರೇಮ ವೈಫಲ್ಯ ಹಿನ್ನೆಲೆ: ಕೊಣಾಜೆಯಲ್ಲಿ ಶಾಲಾ ಆವರಣದಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ

- Advertisement -
- Advertisement -

ಉಳ್ಳಾಲ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ‌ ಗ್ರಾಮದ ಕೊಲ್ಲರಕೋಡಿ ಶಾಲಾ ಮೈದಾನದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತ ಯುವಕನನ್ನು ನೆತ್ತಿಲಪದವು ಸೈಟ್ ನ ರಕ್ಷಿತ್ ಸನಿಲ್ (22) ಎಂದು ಗುರುತಿಸಲಾಗಿದೆ.

ರಕ್ಷಿತ್ ಕೊಲ್ಲರಕೋಡಿ ಪ್ರೌಢಶಾಲೆಯ ಕಚೇರಿಯ ಮುಂಭಾಗದ ಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ  ಅದೇ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ. ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣ ಎಂದು ಶಂಕಿಸಲಾಗಿದೆ. ಕೊಣಾಜೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!