Friday, May 17, 2024
Homeಕರಾವಳಿಉಡುಪಿಕುಂದಾಪುರ: ಬೈಕ್ ನಲ್ಲಿ ಕುಂದಾಪುರದಿಂದ ಕಾಶ್ಮೀರಕ್ಕೆ ಹೊರಟ ಯುವತಿ : ಅಸಮಾನತೆ ಹೋಗಲಾಡಿಸಲು ದೇಶಯಾತ್ರೆ

ಕುಂದಾಪುರ: ಬೈಕ್ ನಲ್ಲಿ ಕುಂದಾಪುರದಿಂದ ಕಾಶ್ಮೀರಕ್ಕೆ ಹೊರಟ ಯುವತಿ : ಅಸಮಾನತೆ ಹೋಗಲಾಡಿಸಲು ದೇಶಯಾತ್ರೆ

spot_img
- Advertisement -
- Advertisement -

ಕುಂದಾಪುರ: ಬೈಕ್ ನಲ್ಲಿ ಹಗಲು ರಾತ್ರಿ ದೇಶ ಸುತ್ತೋದು ಸವಾಲಿನ ಕೆಲಸ. ಆದರೆ ಈ ಸವಾಲಿನ ಕೆಲಸವನ್ನು ಸಲೀಸಾದ ಸಾಧನೆಯ ಹಾದಿ ಮಾಡಿಕೊಂಡ ಅಪರೂಪದ ಪ್ರತಿಭೆ ಈಕೆ. ಬೈಕ್ ಮೂಲಕ ಒಬ್ಬಂಟಿಯಾಗಿ ಕುಂದಾಪುರದಿಂದ ಕಾಶ್ಮೀರಕ್ಕೆ ಸುಮಾರು 6 ಸಾವಿರ ಕೀಮಿ ದೂರದಷ್ಟು ಕ್ರಮಿಸುವ ಪ್ಲಾನ್ ಮಾಡಿಕೊಂಡು ಹೊರಟಿದ್ದಾರೆ.  ಕುಂಭಾಸಿಯ ಸಾಕ್ಷಿ ಹೆಗ್ಡೆ ತನ್ನ ಬೈಕ್‍ನಲ್ಲೇ ಈ ದಿಗ್ವಿಜಯಕ್ಕೆ  ಹೊರಟಿದ್ದಾರೆ.

ಉತ್ತಮ ಬೈಕ್ ರೈಡರ್ ಆಗಿರುವ ಈಕೆ ಮೇ.25 ರಿಂದ 15 ದಿನಗಳ ಕಾಲ ಬೈಕ್ ಸವಾರಿ ಕೈಗೊಂಡು ಕುಂದಾಪುರದಿಂದ ಕಾಶ್ಮೀರಕ್ಕೆ ಸುಮಾರು 6 ಸಾವಿರ ಕಿಲೋಮೀಟರ್ ದೂರದಷ್ಟು ಒಬ್ಬಂಟಿಯಾಗಿ ಬೈಕ್ ಚಲಾಯಿಸಿಕೊಂಡು ಒಬ್ಬಳೇ ಹೋಗುತ್ತಿದ್ದಾರೆ.

ಮೂಲತಃ ಹೊನ್ನವಾರದ ಶಿವರಾಮ ಹೆಗ್ಡೆ ಹಾಗೂ ಕುಂದಾಪುರ ಮೂಲದ ತಾಯಿ ಪುಷ್ಪಾ ಇವರ 3ನೇ ಮಗಳಾದ ಸಾಕ್ಷಿ ಹೆಗ್ಡೆ ಕುಂದಾಪುರದ ಭಂಡಾರ್‍ಕಾರ್ಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕುಂಭಾಸಿಯಲ್ಲಿ ವಾಸವಾಗಿದ್ದಾರೆ. ಕುಂದಾಪುರದಿಂದ ಈ ಸಾಧನೆಯನ್ನು ಹಾದಿ‌ ಹಿಡಿದವರಲ್ಲಿ ಸಾಕ್ಷಿಯೇ‌ ಮೊದಲಿಗರು.

ಮೇ.25 ರಂದು ಬೆಳಿಗ್ಗೆ 7.30ಕ್ಕೆ ಕುಂಭಾಸಿ ಮನೆಯಿಂದ ಹೊರಟು ಸಂಜೆ 5 ಗಂಟೆಯ ವೇಳೆಗೆ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸುಮಾರು 520 ಕೀಮಿ ದೂರ ಬೈಕ್ ರೈಡ್ ಮಾಡಿಕೊಂಡು ಮೊದಲ ದಿನ ತೆರಳಿದ್ದಾರೆ. 2ನೇ ದಿನದಲ್ಲಿ 380 ಕೀಮಿ ಸಂಚಾರಿಸಿ ಪನ್ವೇಲ್ ಮುಟ್ಟಿದ್ದಾರೆ. 3 ನೇ ದಿನದಲ್ಲಿ 700 ಕೀಮಿ ಕ್ರಮಿಸುವ ಗುರಿ ಇಟ್ಟುಕೊಂಡಿರುವ ಸಾಕ್ಷಿ ಹೆಗ್ಡೆ 15 ದಿನದೊಳಗೆ ಕಾಶ್ಮೀರ ಪ್ರವಾಸ ಮಾಡಿ ವಾಪಸ್ಸು ಬರುವ ನಿರೀಕ್ಷೆ ಇದೆ.

ತನಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳಲು ಅಂಗಡಿಗಳಿಗೆ ಹೋದಾಗ ಅಲ್ಲಿ ನನ್ನ ಉದ್ದೇಶವನ್ನು ತಿಳಿದು ಹಣವನ್ನು ಪಡೆಯದೇ ಸ್ಥಳೀಯರು ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ. ಇದಲ್ಲದೇ ಹೋಗುವಾಗ ಪೊಲೀಸರು ಕೂಡ ನನ್ನನ್ನು ಗಮನಿಸಿ ಒಟ್ಟಿಗೆ ಊಟ ಮಾಡುವ ಬನ್ನಿ ಎಂದು ಕರೆದು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸಾಕ್ಷಿ ಹೇಳಿಕೊಂಡಿದ್ದಾರೆ.

ವಿದ್ಯಾಭ್ಯಾಸದ ಸಂದರ್ಭದಲ್ಲೇ ಈ ಉದ್ದೇಶವನ್ನು ಪೂರೈಸಿಕೊಳ್ಳಬೇಕೆಂಬ ಆಸೆ ಇಟ್ಟುಕೊಂಡಿದ್ದ ಸಾಕ್ಷಿಗೆ ಪ್ರವಾಸ ಮಾಡುವ ಮೊದಲು ಒದಗಿದ ಬಹು ದೊಡ್ಡ ಸವಾಲೆಂದರೆ ಹಣಕಾಸು. ದುಡ್ಡನ್ನು ಜೋಡಿಸುವುದು ಹೇಗೆ ಎಂದು ಯೋಚನೆ ಮಾಡುವಾಗ ಸ್ಥಳೀಯ ಹಿಂದೂಪರ ಸಂಘಟನೆಗಳು ಹಾಗೂ ವೈಯಕ್ತಿಕವಾಗಿ ದಾನಿಗಳು ಕೈಜೋಡಿಸಿದ ಸಲುವಾಗಿ ಈ ಬೈಕ್ ರೈಡ್ ಅನ್ನು ಮುಂದುವರೆಸಿದ್ದಾರೆ.

ನಾವು ಎಷ್ಟೇ ಮುಂದುವರಿದಿದ್ದೇವೆ ಅಂದರೂ ಇವತ್ತಿಗೂ ಸ್ತ್ರೀ-ಪುರುಷ ಬೇದಭಾವ ಜನರ ಮನಸೊಳಗೆ ಮನೆಮಾಡಿದೆ. ದೇಶದಲ್ಲಿನ ಸ್ತ್ರೀ-ಪುರುಷರ ನಡುವಿನ ಅಸಮಾನತೆ ಹೋಗಲಾಡಿಸಲು ಹಾಗೂ ಒಂಟಿ ಮಹಿಳೆ ದೇಶದಾದ್ಯಂತ ಸಂಚರಿಸಲು ಶಕ್ತಳು ಎನ್ನುವುದನ್ನು ಸಾಬೀತುಪಡಿಸಲು ಮಹಿಳೆಯೊಬ್ಬಳ ಸಾಮರ್ಥ್ಯವನ್ನು ಈಕೆ ಸಾಕ್ಷೀಕರಿಸಿದ್ದಾರೆ. ಅಲ್ಲದೇ ಸ್ತ್ರೀ ಶಕ್ತಿ ಸಮಾಜದ ಮುಂದೆ ವ್ಯಕ್ತವಾಗಬೇಕು ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಸುಮಾರು 6 ಸಾವಿರ ಕಿಲೋಮೀಟರ್ ರಸ್ತೆ ಮಾರ್ಗವನ್ನು ಬೈಕ್‍ನಲ್ಲಿ ಸಂಚರಿಸಲು ಸಾಕ್ಷಿ ಮುಂದಾಗಿದ್ದಾರೆ..

ಗೆಳೆಯರ ಸಹಕಾರದಿಂದ ಕಳೆದ ಒಂದು ವರ್ಷಗಳಿಂದ ಬೈಕ್ ತರಬೇತಿ ಪಡೆದುಕೊಂಡಿದ್ದಾರೆ. ಇದೀಗ ಸ್ವಂತ ಬಜಾಜ್ ಪಲ್ಸರ್ ಬೈಕ್‍ನ್ನು ತೆಗೆದುಕೊಂಡು ಒಳ್ಳೆಯ ಉದ್ದೇಶದೊಂದಿಗೆ ಕಾಶ್ಮೀರ ಪ್ರವಾಸವನ್ನು ಕೈಗೊಂಡಿದ್ದಾರೆ. ದಿನ ನಿತ್ಯ ಬೆಳಿಗ್ಗೆ 6 ಗಂಟೆಗೆ ಹೊರಟು ಸಂಜೆ 6 ಗಂಟೆಗೆ ರೈಡ್ ಪೂರ್ಣಗೊಳಿಸುತ್ತಾರೆ.ಮಹಿಳೆಯರು ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ. ಯಾರ ಸಹಾಯವಿಲ್ಲದೇ ಗೊಗಲ್ ಮ್ಯಾಪ್ ಬಳಸಿಕೊಂಡು ಸಂಚಾರಿಸುತ್ತಿದ್ದೇನೆ. ಹೆತ್ತವರ ಪ್ರೋತ್ಸಾಹ ಹಾಗೂ ಊರಿನವರ ಸಹಕಾರದಿಂದ ಈ ಅವಕಾಶ ಸಾಧ್ಯವಾಗಿದೆ ಎಂದಿದ್ದಾರೆ ಸಾಕ್ಷಿ ಹೆಗ್ಡೆ.

- Advertisement -
spot_img

Latest News

error: Content is protected !!