Wednesday, June 3, 2026
Homeಕರಾವಳಿಮಂಗಳೂರು : ಶೌಚಾಲಯಕ್ಕೆ ಹೋಗುತ್ತೆನೆಂದು ಹೇಳಿ‌ ಹೋದ ಯುವತಿ  ನಾಪತ್ತೆ

ಮಂಗಳೂರು : ಶೌಚಾಲಯಕ್ಕೆ ಹೋಗುತ್ತೆನೆಂದು ಹೇಳಿ‌ ಹೋದ ಯುವತಿ  ನಾಪತ್ತೆ

- Advertisement -
- Advertisement -

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆಂದು ಹೋದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ದೀಪಿಕಾ (19) ನಾಪತ್ತೆಯಾಗಿರುವ ಯುವತಿ. ಆಕೆಯ  ತಂದೆ ಹಾವೇರಿ ಹಾನಗಲ್‌ ತಾಲೂಕಿನ ಹಾನಗಲ್‌ ತಾಲೂಕಿನ ನಿವಾಸಿ ನಾಗರಾಜ್‌ ಫ‌ಕೀರಪ್ಪ ಗೊಲ್ಲರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ನಾಗರಾಜ್‌ ಫ‌ಕೀರಪ್ಪ ಗೊಲ್ಲರ ಅವರು ಮಂಡಿನೋವಿನ ಚಿಕಿತ್ಸೆಗಾಗಿ ಮಂಗಳೂರಿಗೆ ಪುತ್ರಿ ದೀಪಿಕಾ ಜತೆಯಲ್ಲಿ ಹೊರಟು ಜು. 2ರಂದು ಬೆಳಗ್ಗೆ 5 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ತಲುಪಿದ್ದರು. ಅಲ್ಲಿ ನಾಗರಾಜ್‌ ಪುರುಷರ ಶೌಚಾಲಯಕ್ಕೆ ತೆರಳಿದ್ದರು.

ದೀಪಿಕಾ ಮಹಿಳೆಯರ ಶೌಚಾಲಯಕ್ಕೆ ತೆರಳಿದ್ದರು. ನಾಗರಾಜ್‌ ಅವರು ಶೌಚಾಲಯದಿಂದ ಹೊರಗೆ ಬಂದು ದೀಪಿಕಾಳಿಗೆ ಕಾದು ಕುಳಿತರೂ ಆಕೆ ಬಂದಿರಲಿಲ್ಲ. ಬಸ್‌ ನಿಲ್ದಾಣದ ವಠಾರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಬರ್ಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!