Thursday, June 4, 2026
Homeಕರಾವಳಿಮಂಗಳೂರುಸುಳ್ಯ;  ವಿದೇಶಕ್ಕೆ ಹೋಗೋದಾಗಿ ಹೆತ್ತವರಿಗೆ ನಂಬಿಸಿ ಕೊಲ್ಲಮೊಗ್ರದ ಯುವತಿ ಅನ್ಯಕೋಮಿನ ಯುವಕನೊಂದಿಗೆ ಪರಾರಿ; ಮಗಳನ್ನು ಏರ್...

ಸುಳ್ಯ;  ವಿದೇಶಕ್ಕೆ ಹೋಗೋದಾಗಿ ಹೆತ್ತವರಿಗೆ ನಂಬಿಸಿ ಕೊಲ್ಲಮೊಗ್ರದ ಯುವತಿ ಅನ್ಯಕೋಮಿನ ಯುವಕನೊಂದಿಗೆ ಪರಾರಿ; ಮಗಳನ್ನು ಏರ್ ಪೋರ್ಟ್ ವರೆಗೆ ಬಿಟ್ಟು ಬಂದ ಪೋಷಕರು ಕಂಗಾಲು

- Advertisement -
- Advertisement -

ಸುಳ್ಯ;  ವಿದೇಶಕ್ಕೆ ಹೋಗೋದಾಗಿ ಹೆತ್ತವರಿಗೆ ನಂಬಿಸಿ ಕೊಲ್ಲಮೊಗ್ರದ ಯುವತಿಯೊಬ್ಬಳು ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈ ವರ್ಷವಷ್ಟೇ ಪಿಯುಸಿ ತೇರ್ಗಡೆ ಹೊಂದಿದ್ದ ಕೊಲ್ಲಮೊಗ್ರದ ಯುವತಿಯೊಬ್ಬಳು ತನ್ನ ಹೆತ್ತವರಿಗೆ  ವಿದೇಶದಲ್ಲಿ ಕೆಲಸ ಸಿಕ್ಕಿದೆ ಎಂದು ಹೇಳಿ ನಂಬಿಸಿದ್ದಳು. ಬಡತನದಲ್ಲಿಯೇ ಇದ್ದ ಕುಟುಂಬಕ್ಕೆ ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದೆ ಎಂಬ ಸುದ್ದಿ ಸಂಭ್ರಮ ತಂದಿತ್ತು. ಸ್ವತಃ ಹೆತ್ತವರೇ  ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈಕೆಯನ್ನು ಬಿಟ್ಟು, ಒಳ್ಳೆಯದಾಗಲಿ ಎಂದು ವಾಪಾಸ್ಸಾಗಿದ್ದರು. ಮಗಳನ್ನು ಏರ್‌ಪೋರ್ಟ್‌ಗೆ ಬಿಟ್ಟು ಮನೆಗೆ ಬಂದ ಕುಟುಂಬದವರು, ತಮ್ಮ ವಾಟ್ಸಾಪ್‌ ಸ್ಟೇಟಸ್‌ಗಳಲ್ಲಿ ಮಗಳು ಫಾರಿನ್ ಗೆ ಹೋಗಿದ್ದಾಳೆ ಎಂಬ ಸಂತೋಷದ ಕ್ಷಣಗಳ ಫೋಟೋಗಳನ್ನು ಹಾಕಿಕೊಂಡಿದ್ದರು.

ಅಷ್ಟರಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನೇನು ವಿಮಾನ ಹೊರಟಿರಬಹುದು ಒಮ್ಮೆ ಕರೆ ಮಾಡಿ ನೋಡೋಣ ಎಂದು ಮನೆಯವರು ಕರೆ ಮಾಡಿದ್ದಾರೆ. ಆ ಆಕೆಯ ಫೋನ್‌ ರಿಂಗ್‌ ಆಗಿದೆ. ಫೋನ್‌ ರಿಂಗ್‌ ಆಗಿದ್ದಿರಂದ ಮನೆಯವರಿಗೆ ಅನುಮಾನ ಶುರುವಾಗಿದೆ. ಈಗಾಗಲೇ ವಿಮಾನ ಹೊರಟ ಸಮಯವಾಗಿದೆ. ಹಾಗಿದ್ದರೂ ಆಕೆಯ ಮೊಬೈಲ್‌ ರಿಂಗ್‌ ಆಗೋದಕ್ಕೆ ಹೇಗೆ ಸಾಧ್ಯ ಎನ್ನುವ ಅನುಮಾನ ಬಂದಿದೆ. ಕೆಲ ದಿನಗಳ ಬಳಿಕ ಆಕೆಯನ್ನು ಧರ್ಮಸ್ಥಳ ಬಸ್‌ನಲ್ಲಿ ನೋಡಿರುವುದಾಗಿ ಕೆಲವರು ತಿಳಿಸಿದ್ದಾರೆ.

ಆದರೆ ಆಗಿದ್ದೇ ಬೇರೆ…ಹೆತ್ತವರು ಮುಂದೆ ವಿದೇಶಕ್ಕೆ ಹೋಗೋದಾಗಿ ನಾಟಕ ಮಾಡಿದ ಮಗಳು ವಿಮಾನ ನಿಲ್ದಾಣದ ಒಳ ಹೋಗುವ ಡ್ರಾಮಾ ಮಾಡಿ ಅಲ್ಲಿಂದ ತನ್ನ ವರಸೆ ತೋರಿಸಿದ್ದಾಳೆ. ವಿಮಾನ ನಿಲ್ದಾಣದಿಂದಲೇ ಅನ್ಯಕೋಮಿನ ಯುವಕನ ಜೊತೆಗೆ ಎಸ್ಕೇಪ್‌ ಆಗಿದ್ದಾಳೆ. ಮಗಳು ಕಾಣೆ ಆಗಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ಬೆಂಗಳೂರಿನಲ್ಲೇ ದೂರು ನೀಡಬೇಕೆಂದು ಕಳುಹಿಸಿಕೊಟ್ಟಿದ್ದಾರೆ. ಇನ್ನು ಹಿಂದೂ ಸಂಘಟನೆಗಳು ಕೂಡ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಯುವತಿಯ ಪೋಷಕರು ಬೆಂಗಳೂರಿನಲ್ಲಿ ಮಗಳು ನಾಪತ್ತೆಯಾಗಿರುವ ದೂರು ದಾಖಲು ಮಾಡಿದ್ದಾರೆ.

- Advertisement -

Latest News

error: Content is protected !!