Monday, April 29, 2024
Homeತಾಜಾ ಸುದ್ದಿಹೀಗೂ ಉಂಟೆ!: ದೇವರನ್ನೇ ಮದುವೆಯಾದ ಯುವತಿ

ಹೀಗೂ ಉಂಟೆ!: ದೇವರನ್ನೇ ಮದುವೆಯಾದ ಯುವತಿ

spot_img
- Advertisement -
- Advertisement -

ರಾಜಸ್ಥಾನ; ಇಲ್ಲಿನ ಜೈಪುರದಲ್ಲಿ ವಿಚಿತ್ರ ವಿವಾಹವೊಂದು ನಡೆದಿದೆ. 30 ವರ್ಷದ ಪದವೀಧರೆ ಯುವತಿ ದೇವರನ್ನೇ ಮದುವೆಯಾಗಿದ್ದಾಳೆ. ಜೈಪುರದ ಗೋವಿಂದಗಢ ಸಮೀಪದ ನರಸಿಂಗಪುರ ಗ್ರಾಮದಲ್ಲಿ ಈ ಘಟನೆ‌‌ ನಡೆದಿದೆ.

ನರಸಿಂಗಪುರ ನಿವಾಸಿಯಾಗಿರುವ 30 ವರ್ಷದ ಪೂಜಾ ಸಿಂಗ್ ಎಂಬ ಯುವತಿ ಇತ್ತೀಚೆಗಷ್ಟೆ ಭಗವಾನ್ ವಿಷ್ಣುವನ್ನು ನಂಬಿಕೆಯ ವಿವಾಹವಾಗಿದ್ದಾಳೆ . ಪೂಜಾ ಡಿಸೆಂಬರ್ 8 ರಂದು ಭಗವಾನ್ ವಿಷ್ಣುವನ್ನು ವಿವಾಹವಾಗಿದ್ದಾಳೆ.ವಿವಾಹದ ಬಗ್ಗೆ ಜನರ ಮೂದಲಿಕೆಯಿಂದ ನಾನು ತೊಂದರೆಗೀಡಾಗಿದ್ದೇನೆ,ಗಂಡ ಹೆಂಡತಿ ಜಗಳ ನೋಡಿ ಮದುವೆಯೇ ಬೇಡ ಎಂದು ಮೊದಲೇ ನಿರ್ಧರಿಸಿದ್ದೆ. ಈ ಅಪಹಾಸ್ಯಗಳನ್ನು ತಪ್ಪಿಸಲು,ಪೂಜಾ ಗ್ರಾಮದ ದೇವಸ್ಥಾನದಲ್ಲಿ ಕುಳಿತು ಭಗವಾನ್ ವಿಷ್ಣುವನ್ನು ವಿವಾಹವಾದೆ ಎಂದು ಪೂಜಾ ಸಿಂಗ್ ಹೇಳಿದ್ದಾರೆ.

ಈಕೆಯ ತಂದೆ ನಿವೃತ್ತ ಬಿಎಸ್​​ಎಫ್​ ಯೋಧರಾಗಿದ್ದು, ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಗಳನ್ನು ಬೆಂಬಲಿಸಿದ್ದಾರೆ.ಜೊತೆಗೆ ತಾಯಿ ರತನ್ ಕನ್ವಾರ್ ಮಗಳ ಕನ್ಯಾದಾನ ನೆರವೇರಿಸಿದ್ದಾರೆ. ದೇವಸ್ಥಾನವೊಂದರಲ್ಲಿ ವಿವಾಹ ಕಾರ್ಯಕ್ರಮ ನಡೆದಿದೆ.ಈ ವೇಳೆ ಸುಮಾರು 300 ಜನರು ಭಾಗವಹಿಸಿದ್ದರು. ಮನೆಯಲ್ಲಿಯೇ ವಿಷ್ಣುವನ್ನು ಭಕ್ತಿಯಿಂದ ನಿತ್ಯವೂ ಆರಾಧಿಸುತ್ತೇನೆ. ಜೊತೆಗೆ ವಿಷ್ಣುವಿಗೆ ಪ್ರಿಯವಾದಂತಹ ಆಹಾರಗಳನ್ನು ಸಿದ್ಧಪಡಿಸಿ ಅರ್ಪಿಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

- Advertisement -
spot_img

Latest News

error: Content is protected !!