Tuesday, June 9, 2026
Homeಕ್ರೀಡೆಮಂಗಳಮುಖಿಯಾಗಿ ಬದಲಾದ ಫೇಮಸ್ ಡಬ್ಲ್ಯೂಡಬ್ಲ್ಯೂಇ ಸ್ಟಾರ್

ಮಂಗಳಮುಖಿಯಾಗಿ ಬದಲಾದ ಫೇಮಸ್ ಡಬ್ಲ್ಯೂಡಬ್ಲ್ಯೂಇ ಸ್ಟಾರ್

- Advertisement -
- Advertisement -

ವಾಷಿಂಗ್ಟನ್​: 2009ರಿಂದ 2012ರ ಕಾಲದಲ್ಲಿ ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ)
ನೋಡಿದ್ದವರಿಗೆ ಟೈಲರ್ ರೆಕ್ಸ್ ಹೆಸರಿನ ರಿಂಗ್​ನಿಂದ ಫೇಮಸ್​ ಆಗಿದ್ದ ಗಬ್ಬಿ ಟಫ್ಟ್ ನ ಯಾರು ಮರೆಯಲು ಸಾಧ್ಯವಿಲ್ಲ.

ಡಬ್ಲ್ಯೂಡಬ್ಲ್ಯೂಇನ ಅಖಾಡದಲ್ಲಿ ಇದ್ದಿದ್ದು 3-4 ವರ್ಷವಾದರೂ, ಅಬಾಲ ವೃದ್ಧರಿಂದ ಹಿಡಿದು ಎಲ್ಲರೂ ಗಬ್ಬಿ ಟಫ್ಟ್ ಸೆಣಸಾಟವನ್ನು ಎಂಜಾಯ್ ಮಾಡಿದ್ದಿದೆ. WWE ರಿಂಗ್‌ನಲ್ಲಿ ನಮ್ಮೆಲ್ಲರನ್ನೂ ರಂಜಿಸಿದ್ದ ಗೇಬ್​ ಟೆಫ್ಟ್ ಖ್ಯಾತಿಯ ಈ ಸ್ಟಾರ್ ಇದೀಗ ಮಂಗಳಮುಖಿಯಾಗಿ ಬದಲಾಗಿ ಎಲ್ಲರಿಗೆ ಶಾಕ್ ನೀಡಿದ್ದಾರೆ.

2002ರಲ್ಲಿ ಪ್ರಿಸ್ಸಿಲ್ಲಾ ಜತೆ ದಾಂಪತ್ಯ ಆರಂಭಿಸಿದ ಅವರು 2011ರಲ್ಲಿ ಮಿಯಾ ಹೆಸರಿನ ಹೆಣ್ಣು ಮಗುವಿನ ತಂದೆಯಾದರು. ಅದಾದ ನಂತರ ಕುಟುಂಬಕ್ಕೆ ಹೆಚ್ಚು ಸಮಯ ನೀಡಬೇಕೆಂದು ಹೇಳಿ 2012ರಲ್ಲಿ WWE ತ್ಯಜಿಸಿದರು. ಇದೀಗ ಅದೇ ಗೇಬ್​ ಟೆಫ್ಟ್​ ಮಂಗಳಮುಖಿಯಾಗಿ ಬದಲಾಗಿದ್ದಾರೆ.

ಅಂದ ಹಾಗೆ ಇದು ಇಂದು ನಿನ್ನೆಯ ಬದಲಾವಣೆ ಅಲ್ಲವಂತೆ. ಅವರು 10ನೇ ವಯಸ್ಸಿನಲ್ಲಿದ್ದಾಗಲೇ ಅವರಿಗೆ ಹೆಣ್ಣು ಮಕ್ಕಳಲ್ಲಿ ಒಲವು ಬಂದಿತ್ತಂತೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಅಮ್ಮನ ಕೋಣೆಗೆ ಹೋಗಿ ಅವರ ಉಡುಗೆ ತೊಟ್ಟುಕೊಳ್ಳುತ್ತಿದ್ದರಂತೆ. ಆ ಉಡುಗೆಯೇ ಅವರಿಗೆ ಹೆಚ್ಚು ಸೂಕ್ತ ಎನಿಸುತ್ತಿತ್ತಂತೆ. ಆದರೆ ಆ ವಿಚಾರವನ್ನು ಎಲ್ಲರಿಂದ ಬಚ್ಚಿಟ್ಟುಕೊಂಡೇ ಬಂದಿದ್ದಾರೆ. ಇತ್ತೀಚೆಗೆ ದೃಢ ನಿರ್ಧಾರ ಮಾಡಿ ಮಂಗಳಮುಖಿಯಾಗಿ ಬದಲಾಗಿದ್ದೇನೆ ಎಂದು ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!