Sunday, May 19, 2024
Homeಕ್ರೀಡೆನಿವೃತ್ತಿ ಘೋಷಿಸಿದ WWE ಲೆಜೆಂಡ್ ಅಂಡರ್ ಟೇಕರ್

ನಿವೃತ್ತಿ ಘೋಷಿಸಿದ WWE ಲೆಜೆಂಡ್ ಅಂಡರ್ ಟೇಕರ್

spot_img
- Advertisement -
- Advertisement -

ನ್ಯೂಯಾರ್ಕ್: ಕಳೆದ ಮೂರು ದಶಕಗಳಿಂದ ಡಬ್ಲ್ಯು ಡಬ್ಲ್ಯುಇ ಮೂಲಕ ಅನೇಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಕುಸ್ತಿಪಟು, ದಿ ಡೆಡ್ಲಿಮ್ಯಾನ್ ಎಂದೇ ಪ್ರಸಿದ್ದರಾಗಿದ್ದ ಅಂಡರ್ ಟೇಕರ್ ತನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ದಿ ಲಾಸ್ಟ್ ರೈಡ್ ಶೋನಲ್ಲಿ ಈ ಬಗ್ಗೆ ಹೇಳಿಕೊಂಡಿರುವ 52 ವರ್ಷದ ಅಂಡರ್ ಟೇಕರ್, ತಮ್ಮ 30 ವರ್ಷದಗಳ ಸುದೀರ್ಘ ರಿಂಗ್ ಒಳಗಿನ ಕುಸ್ತಿ ಪಯಣಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

1965 ಮಾರ್ಚ್ 24ರಂದು ಅಮೇರಿಕಾದ ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ಅಂಡರ್ ಟೇಕರ್ ಜನಿಸಿದ್ದರು. ಇವರ ಮೂಲ ಹೆಸರು ಮಾರ್ಕ್ ವಿಲಿಯಂ ಕ್ಯಾಲವೆ. ಡಬ್ಲ್ಯು ಡಬ್ಲ್ಯುಇ ರಿಂಗ್ ಗೆ ಕಾಲಿಟ್ಟ ನಂತರ ಅಂಡರ್ ಟೇಕರ್ ಆದರು. ಡಬ್ಲ್ಯು ಡಬ್ಲ್ಯುಇ ನ ಅತೀ ಜನಪ್ರಿಯ ಪಟುಗಳಲ್ಲಿ ಅಂಡರ್ ಟೇಕರ್ ಓರ್ವರು.

1990ರಲ್ಲಿಸರ್ವೈವರ್ ಸೀರೀಸ್ ಮೂಲಕ WWE ಗೆ ಕಾಲಿಟ್ಟ ಇವರು, ಮೂರು ಬಾರಿ ಹೆವಿವೈಟ್ ಚಾಂಪಿಯನ್, ನಾಲ್ಕು ಬಾರಿ ಡಬ್ಲ್ಯು ಡಬ್ಲ್ಯು ಇ ಚಾಂಪಿಯನ್, ಒಂದು ಬಾರಿ ಹಾರ್ಡ್ ಕೋರ್ ಚಾಂಪಿಯನ್ ಶಿಪ್ ಜಯಿಸಿದ್ದ ಅಂಡರ್ ಟೇಕರ್ 2007ರಲ್ಲಿ ರಾಯಲ್ ರಂಬಲ್ ಗೆದ್ದಿದ್ದರು.

- Advertisement -
spot_img

Latest News

error: Content is protected !!