Thursday, May 16, 2024
Homeಕರಾವಳಿಉಡುಪಿಮಲ್ಪೆ ಬಂದರಿನ ದಕ್ಕೆಯ ನೀರಿಗೆ ಬಿದ್ದು ಕಾರ್ಮಿಕ ಸಾವು !

ಮಲ್ಪೆ ಬಂದರಿನ ದಕ್ಕೆಯ ನೀರಿಗೆ ಬಿದ್ದು ಕಾರ್ಮಿಕ ಸಾವು !

spot_img
- Advertisement -
- Advertisement -

ಮಲ್ಪೆ: ಕಾರ್ಮಿಕನೋರ್ವ ಮಲ್ಪೆ ಬಂದರಿನ ದಕ್ಕೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಹಾರಾಷ್ಟ್ರ ರತ್ನಗಿರಿಯ ನಿವಾಸಿ ನಿತಿನ್ ಮೃತಪಟ್ಟ ಕಾರ್ಮಿಕ .

ಇತರ ಇಬ್ಬರು ಕಾರ್ಮಿಕರೊಂದಿಗೆ ಈತ ಮಲ್ಪೆ ಬಂದರಿನಲ್ಲಿ ನಾಗಾರ್ಜುನ ಕಂಪೆನಿಯ ಪೈಪ್ ಲೈನ್ ಕಾಮಗಾರಿಯ ಕೆಲಸ ಮಾಡುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ದಕ್ಕೆಯ ನೀರಿಗೆ ಬಿದ್ದು ಕಣ್ಮರೆಯಾಗಿದ್ದನು.

ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು , ತಡರಾತ್ರಿ 12 ಗಂಟೆಯವರೆಗೆ ಶೋಧಕಾರ್ಯ ನಡೆಸಿದ್ದರು.ಆದರೆ ಮೃತದೇಹ ಪತ್ತೆಯಾಗಿರಲಿಲ್ಲ.

ಹೀಗಾಗಿ ಇಂದು ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಮುಂದುವರಿಸಲಾಗಿದೆ. ವ್ಯಕ್ತಿ ಬಿದ್ದು ಜಾಗದಿಂದ ಸ್ವಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ .

- Advertisement -
spot_img

Latest News

error: Content is protected !!