Thursday, July 16, 2026
Homeಅಪರಾಧಬಂಟ್ವಾಳ: ವ್ಯಕ್ತಿಯೋರ್ವ ಮಹಿಳೆಯ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನ- ಆರೋಪಿ ವಿರುದ್ಧ ದೂರು ದಾಖಲು

ಬಂಟ್ವಾಳ: ವ್ಯಕ್ತಿಯೋರ್ವ ಮಹಿಳೆಯ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನ- ಆರೋಪಿ ವಿರುದ್ಧ ದೂರು ದಾಖಲು

- Advertisement -
- Advertisement -

ಬಂಟ್ವಾಳ: ಮನೆಗೆ ನುಗ್ಗಿ ಮಹಿಳೆಯೋರ್ವಳ ಮಾನಭಂಗಕ್ಕೆ ಯತ್ನಿಸಿ ಕೊಲೆ ಬೆದರಿಕೆಯೊಡ್ಡಿದ ಘಟನೆಗೆ ಸಂತ್ರಸ್ತ ಮಹಿಳೆ ಆರೋಪಿ ವಿರುದ್ದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಳೆದು ಒಂದು ವರ್ಷಗಳ ಹಿಂದೆ ಪರಿಚಯವಾದ ಮಂಚಿ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತ ಪದೇ ಪದೇ ಪೋನ್ ಮಾಡಿ ಅಸಹ್ಯವಾಗಿ ಮಾತನಾಡುತ್ತಿದ್ದುದಲ್ಲದೇ ಕರೆ ಸ್ವೀಕರಿಸಿದೇ ಇದ್ದಾಗ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು. ಜೊತೆಗೆ ವಿಡಿಯೋ ಕಾಲ್ ಮಾಡುವಂತೆಯೂ ಒತ್ತಾಯಿಸುತ್ತಿದ್ದ. ಅಲ್ಲದೇ ಜನವರಿ 25 ರಂದು ಯುವತಿಯ ಮನೆಗೆ ಬಂದ ಆರೋಪಿ, ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದು, ಈ ವೇಳೆ ಆತನ ಕೈಯಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿ ಹೋಗಿರುವುದಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

- Advertisement -

Latest News

error: Content is protected !!