Wednesday, May 15, 2024
Homeತಾಜಾ ಸುದ್ದಿವನಿತಾ ಹಾಕಿ ವಿಶ್ವಕಪ್: ಭಾರತಕ್ಕೆ ಮೊದಲ ಗೆಲುವು

ವನಿತಾ ಹಾಕಿ ವಿಶ್ವಕಪ್: ಭಾರತಕ್ಕೆ ಮೊದಲ ಗೆಲುವು

spot_img
- Advertisement -
- Advertisement -

ಭಾರತ ತಂಡ ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವು ಕಂಡಿದೆ. ಈ ಆಟದಲ್ಲಿ ನಾಯಕಿ ಮತ್ತು ಗೋಲ್ ಕೀಪರ್ ಸವಿತಾ ಪೂನಿಯಾ ತೋರಿದ ಅತ್ಯುತ್ತಮ ಪ್ರದರ್ಶನದ ನೆರವು ಈ ಗೆಲುವಿಗೆ ದಾರಿಯಾಯಿತು.

ಮಂಗಳವಾರ ನಡೆದ ಕೆನಡಾ ಎದುರಿನ ಪಂದ್ಯದಲ್ಲಿ ತಂಡವು 3–2ರಿಂದ ಶೂಟೌಟ್‌ನಲ್ಲಿ ಗೆಲುವು ಸಾಧಿಸಿತು. ಗೋಲುಪೆಟ್ಟಿಗೆಗೆ ಭದ್ರಕೋಟೆಯಾಗಿ ನಿಂತ ನಾಯಕಿ ಸವಿತಾ ಪೂನಿಯಾ ಭಾರತ ಮಹಿಳಾ ಹಾಕಿ ತಂಡಕ್ಕೆ ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಜಯ ತಂದು ಕೊಡುವಲ್ಲಿ ಸಫಲವಾಗಿದ್ದಾರೆ. ಈಗಾಗಲೇ ಟೂರ್ನಿಯ ಪ್ರಶಸ್ತಿ ಸ್ಪರ್ಧೆಯಿಂದ ಹೊರಬಿದ್ದಿದ್ದ ಭಾರತಕ್ಕೆ ಈ ಜಯ ಸಮಾಧಾನಕರ ತಂದಿದೆ. ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ದಾಖಲಿಸಿದ್ದವು.

ಕೆನಡಾ ತಂಡದ ಮೇಡ್‌ಲಿನ್ ಸೆಕೊ 11ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. ಭಾರತದ ಪ‍ರ 58ನೇ ನಿಮಿಷದಲ್ಲಿ ಸಲೀಮಾ ಟೆಟೆ ಕೈಚಳಕ ತೋರಿದರು. ಶೂಟೌಟ್‌ನಲ್ಲಿ ಭಾರತ ಮೂರು ಬಾರಿ ಯಶಸ್ಸು ಕಂಡರೆ, ಎದುರಾಳಿ ತಂಡಕ್ಕೆ ಎರಡು ಗೋಲುಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಶೂಟೌಟ್‌ನಲ್ಲಿ ಸವಿತಾ ಅವರು ಎದುರಾಳಿ ತಂಡದ ಆರು ಪ್ರಯತ್ನಗಳನ್ನು ವಿಫಲಗೊಳಿಸಿದರು.

ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿ ಪೈಪೋಟಿ ನಡೆಸಿದವು. ನವನೀತ್ ಕೌರ್, ಸೋನಿಕಾ ಮತ್ತು ನೇಹಾ ಭಾರತ ತಂಡಕ್ಕಾಗಿ ಗೋಲು ಗಳಿಸಿದರು. ಆರಂಭದಲ್ಲೇ ಕೆನಡಾ ಮುನ್ನಡೆ ಸಾಧಿಸಿದ್ದು, ಭಾರತ ತಂಡದ ಒತ್ತಡ ಹೆಚ್ಚಿಸಿತು. 25ನೇ ನಿಮಿಷದಲ್ಲಿ ನವನೀತ್ ಮತ್ತು ವಂದನಾ ಗೋಲು ಗಳಿಕೆಯ ಉತ್ತಮ ಅವಕಾಶವೊಂದನ್ನು ಸೃಷ್ಟಿಸಿದ್ದರು. ಆದರೆ ಎದುರಾಳಿ ಗೋಲ್‌ಕೀಪರ್ ರೋವನ್‌ ಹ್ಯಾರಿಸ್‌ ಚೆಂಡನ್ನು ತಡೆದರು. ಆ ಬಳಿಕವೂ ಕೆಲವು ಅವಕಾಶಗಳು ದೊರೆತರೂ ತಂಡವು 58ನೇ ನಿಮಿಷದಲ್ಲಿ ಸಮಬಲ ಸಾಧಿಸಿತು.

ಇನ್ನು ಸಲೀಮಾ ಗೋಲು ದಾಖಲಿಸಿದರು. ಭಾರತ ತಂಡವು 9–12ನೇ ಸ್ಥಾನ ನಿರ್ಧರಿಸುವ ಮುಂದಿನ ಪಂದ್ಯದಲ್ಲಿ ಜಪಾನ್ ಸವಾಲು ಎದುರಿಸಲಿದೆ. ಬುಧವಾರ ರಾತ್ರಿ 8 ಗಂಟೆಗೆ ಈ ಪಂದ್ಯ ನಡೆಯಲಿದ್ದು, ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ.

- Advertisement -
spot_img

Latest News

error: Content is protected !!