Thursday, June 4, 2026
HomeUncategorizedಬೆಂಗಳೂರಿನಲ್ಲಿ ಯುವತಿ ತಲೆಗೆ ರಿವಾಲ್ವರ್ ಇಟ್ಟು ಅತ್ಯಾಚಾರ: ಉದ್ಯಮಿ ಅರೆಸ್ಟ್

ಬೆಂಗಳೂರಿನಲ್ಲಿ ಯುವತಿ ತಲೆಗೆ ರಿವಾಲ್ವರ್ ಇಟ್ಟು ಅತ್ಯಾಚಾರ: ಉದ್ಯಮಿ ಅರೆಸ್ಟ್

- Advertisement -
- Advertisement -

ಬೆಂಗಳೂರು: ಯುವತಿಯ ತಲೆಗೆ ರಿವಾಲ್ವರ್ ಇಟ್ಟು ಬೆದರಿಸಿದ ಉದ್ಯಮಿಯೊಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಪ್ರಕರಣ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.


ಪ್ರಕರಣ ಸಂಬಂಧ ಆರೋಪಿ ಬೆಂಗಳೂರಿನಲ್ಲಿ ಟೈಲ್ಸ್ ವ್ಯವಹಾರ ನಡೆಸುತ್ತಿರುವ ಬಿಹಾರ ಮೂಲದ ಉದ್ಯಮಿ ಅನಿಲ್ ರವಿಶಂಕರ್ ಪ್ರಸಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.


ಸಂತ್ರಸ್ತ ಯುವತಿ ಆರೋಪಿ ಉದ್ಯಮಿಯ ಒಡೆತದನದ ಪಿಜಿಯಲ್ಲಿ ವಾಸವಿದ್ದಳು. ಆಕೆಯ ಕೊಠಡಿಗೆ ತೆರಳಿದ ಉದ್ಯಮಿ ತೆಲೆಗೆ ರಿವಾಲ್ವರ್ ಇಟ್ಟು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಸದ್ಯ, ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!