Wednesday, June 3, 2026
Homeಕರಾವಳಿಪುತ್ತೂರು: ಡೆಂಗ್ಯೂ ಜ್ವರಕ್ಕೆ ಎರಡನೇ ಬಲಿ, ವಿವಾಹಿತ ಮಹಿಳೆ ಬಲಿ

ಪುತ್ತೂರು: ಡೆಂಗ್ಯೂ ಜ್ವರಕ್ಕೆ ಎರಡನೇ ಬಲಿ, ವಿವಾಹಿತ ಮಹಿಳೆ ಬಲಿ

- Advertisement -
- Advertisement -

ಪುತ್ತೂರು, ಜೂ.19: ಡೆಂಗಿ ಜ್ವರ ಬಾಧಿತ ತಾಲೂಕಿನ ಪರ್ಪುಂಜ ನಿವಾಸಿ ವಿವಾಹಿತ ಮಹಿಳೆಯೊಬ್ಬರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪುತ್ತೂರು ತಾಲೂಕಿನ ಪರ್ಪುಂಜ ನಿವಾಸಿ ನಝೀರ್ ಮಾಸ್ಟರ್ ಅವರ ಪತ್ನಿ ನಸೀಮಾ(32) ಮೃತಪಟ್ಟ ಮಹಿಳೆ.

ನಸೀಮಾ ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು ಪುತ್ತೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು- ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತಿ, ಮೂವರು ಪುತ್ರರನ್ನು ಅಗಲಿದ್ದಾರೆ.

ಪುತ್ತೂರು ತಾಲೂಕಿನಲ್ಲಿ ಡೆಂಗಿ ಜ್ವರಕ್ಕೆ ಬಲಿಯಾದ ಎರಡನೆ ಪ್ರಕರಣ ಇದಾಗಿದ್ದು, ವಾರದ ಹಿಂದೆ ಬೆಟ್ಟಂಪಾಡಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು

- Advertisement -

Latest News

error: Content is protected !!