Friday, June 5, 2026
HomeUncategorizedಬೆಳ್ತಂಗಡಿ; ಕೂಲಿ ಕೆಲಸಕ್ಕೆಂದು ಹೋದ ಮಹಿಳೆ ಕುಸಿದು ಬಿದ್ದು ಸಾವು

ಬೆಳ್ತಂಗಡಿ; ಕೂಲಿ ಕೆಲಸಕ್ಕೆಂದು ಹೋದ ಮಹಿಳೆ ಕುಸಿದು ಬಿದ್ದು ಸಾವು

- Advertisement -
- Advertisement -

ಬೆಳ್ತಂಗಡಿ: ಕೂಲಿ ಕೆಲಸಕ್ಕೆಂದು ಹೋದ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಇಲ್ಲಿನ ಮುಂಡಾಜೆ ಗ್ರಾಮದ ಸನ್ಯಾಸಿಕಟ್ಟೆ ನಿವಾಸಿ ಪಾರ್ವತಿ(55) ಮೃತ ದುರ್ದೈವಿ. ಇವರು ಮುಂಡಾಜೆ ಗ್ರಾಮದ ಸೊಮಂತ್ತಡ್ಕ ಗಣೇಶ ಎಂಬವರ ಮನೆಗೆ ಮಂಗಳವಾರ ಕೂಲಿ ಕೆಲಸಕ್ಕೆಂದು ಹೋಗಿದ್ದರು.

ಅಲ್ಲಿ ಕೆಲಸ ಮಾಡುತ್ತಿದ್ದ ಸಮಯ ಸಂಜೆ ಒಮ್ಮೆಲೇ ಕುಸಿದು ಬಿದ್ದು, ಪ್ರಜ್ಞೆ ಕಳೆದುಕೊಂಡರೆನ್ನಲಾಗಿದೆ. ಕೂಡಲೇ ಚಿಕಿತ್ಸೆಗಾಗಿ ಕಕ್ಕಿಂಜೆ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಮೃತರ ಪುತ್ರಿ ಪುಷ್ಪಾ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!