Saturday, June 6, 2026
Homeಕರಾವಳಿಬಂಟ್ವಾಳ: ಕಾರು ಡಿಕ್ಕಿಯಾಗಿ ಮಹಿಳೆ ಸಾವು

ಬಂಟ್ವಾಳ: ಕಾರು ಡಿಕ್ಕಿಯಾಗಿ ಮಹಿಳೆ ಸಾವು

- Advertisement -
- Advertisement -

ಬಂಟ್ವಾಳ: ಕಾರು ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ನಡೆದಿದೆ. ಕಾಡಬೆಡ್ಡು ನಿವಾಸಿ ಸೇಸಮ್ಮ ಮೃತಪಟ್ಟ ಮಹಿಳೆ.

‌ಸೇಸಮ್ಮ ಅವರು ಮನೆಯಿಂದ ವಗ್ಗ ಪೇಟೆಗೆ ಸ್ವಸಹಾಯ ಸಂಘದ ಹಣವನ್ನು ಪಾವತಿ ಮಾಡಲು ನಡೆದುಕೊಂಡು ಬರುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿದೆ. ಮಂಗಳೂರಿನ ಕಡೆ ಪ್ರಯಾಣ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಮಹಿಳಾ ವೈದ್ಯೆಯ ಕಾರು ಇದಾಗಿದೆ. ಗಂಭೀರವಾದ ಗಾಯಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿಲು ಕೊಂಡುಹೋಗಲಾಯಿತಾದರೂ ದಾರಿ‌ಮಧ್ಯೆ ಅಸುನೀಗಿದ್ದಾರೆ ಎಂದು ‌ವೈದ್ಯರು ತಿಳಿಸಿದ್ದಾರೆ.

ಇತ್ತೀಚೆಗೆ ಈಕೆಯ ಪತಿಗೆ ವಗ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇದೇ ರೀತಿ ರಿಕ್ಷಾವೊಂದು‌ ಡಿಕ್ಕಿಯಾಗಿದೆ. ಬಳಿಕ ಕಾಲಿಗೆ ಗಂಭೀರವಾದ ಗಾಯವಾಗಿ ನಡೆಯಲಾರದೆ ಮನೆಯಲ್ಲಿದ್ದು,ಸ್ವಲ್ಪ ಸಮಯದ ಬಳಿಕ ನಿಧನರಾಗಿದ್ರು. ಇದೀಗ ಇವರು ಇದೇ ರೀತಿ ಸಾವನ್ನಪ್ಪಿರೋದು ಕಾಕತಾಳೀಯವೇ ಸರಿ.

- Advertisement -

Latest News

error: Content is protected !!