Thursday, June 4, 2026
Homeಇತರಮೇಯಲು ಬಿಟ್ಟ ದನದ ಕಾಲು ಕಡಿದ ದುಷ್ಕರ್ಮಿ....! ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು...!

ಮೇಯಲು ಬಿಟ್ಟ ದನದ ಕಾಲು ಕಡಿದ ದುಷ್ಕರ್ಮಿ….! ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು…!

- Advertisement -
- Advertisement -

ಕಾರ್ಕಳ: ಜೀವನೋಪಾಯಕ್ಕಾಗಿ ಸಾಕುತ್ತಿದ್ದ ದನವೊಂದರ ಕಾಲನ್ನು ನೆರೆಮನೆಯ ವ್ಯಕ್ತಿಯೊಬ್ಬ ಕಡಿದ ಘಟನೆ ಕುಕ್ಕುಂದೂರು ಗ್ರಾಮದ ನಕ್ರೆ ಪೊಸನೊಟ್ಟು ಎಂಬಲ್ಲಿ ನಡೆದಿದೆ.

ಪೊಸನೊಟ್ಟಿನ ಪ್ರಮೀಳಾ (29) ಪ್ರಕರಣದ ದೂರುದಾರರು. ನೆರೆಮನೆಯ ಡೆಮ್ಮಿ ಡಿಸೋಜಾ ಆರೋಪಿ. ಹಿತ್ತಲಿಗೆ ತಡೆಗೋಡೆ ಇಲ್ಲದೇ ಇದ್ದುದರಿಂದ ಮೇಯಲು ಬಿಟ್ಟ ದನವು ಡೆಮ್ಮಿ ಡಿಸೋಜಾ ಅವರ ಹಿತ್ತಲಿಗೆ ಹೋಗಿತ್ತು. ದನವನ್ನು ಕೊಲ್ಲುವ ಉದ್ದೇಶದಿಂದ, ಎಸೆದ ಕತ್ತಿಯು ದನದ ಕಾಲಿಗೆ ಬಿದ್ದು ದನದ ಹಿಂದಿನ ಬಲಕಾಲಿಗೆ ರಕ್ತ ಗಾಯವಾಗಿರುವುದಾಗಿ ಕಾರ್ಕಳ ನಗರ ಠಾಣೆಗೆ ಪ್ರಮೀಳಾ ದೂರು ನೀಡಿದ್ದಾರೆ.

ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ದನದ ಕಾಲು ಕಡಿಯಲಾಗಿದೆ ಎಂಬ ಮಾಹಿತಿ ತಿಳಿದ ಹಿಂದು ಜಾಗರಣಾ ವೇದಿಕೆ ಘಟನಾ ಸ್ಥಳಕ್ಕೆ ಅಗಮಿಸಿ ಮನೆ ಮಂದಿಗೆ ಧೈರ್ಯ ತುಂಬಿದ್ದಾರೆ.

- Advertisement -

Latest News

error: Content is protected !!