Saturday, June 6, 2026
HomeWorldಅಫ್ಘಾನ್ ಮಹಿಳೆಯರು ಸಚಿವರಾಗುವಂತಿಲ್ಲ, ಮಕ್ಕಳನ್ನಷ್ಟೇ ಹೆರಬೇಕು ;ತಾಲಿಬಾನ್‌

ಅಫ್ಘಾನ್ ಮಹಿಳೆಯರು ಸಚಿವರಾಗುವಂತಿಲ್ಲ, ಮಕ್ಕಳನ್ನಷ್ಟೇ ಹೆರಬೇಕು ;ತಾಲಿಬಾನ್‌

- Advertisement -
- Advertisement -

ಕಾಬೂಲ್: ಮಹಿಳೆಯರು ಮಂತ್ರಿಗಳಾಗಬಾರದು. ಅವರು ಮಕ್ಕಳನ್ನು ಮಾತ್ರ ಹೆರಬೇಕು ಎಂದು ತಾಲಿಬಾನ್ ವಕ್ತಾರ ಸಯ್ಯದ್ ಜೆಕ್ರುಲ್ಲಾ ಹಾಶಮಿ ಹೇಳಿಕೆ ನೀಡಿದ್ದಾರೆ.

ಮಹಿಳೆಯರು ಮಂತ್ರಿಯಾಗಲು ಸಾಧ್ಯವಿಲ್ಲ. ಮಹತ್ವದ ಜವಾಬ್ದಾರಿಗಳನ್ನು ಹೆಣ್ಣುಮಕ್ಕಳಿಗೆ ವಹಿಸಿದರೆ ಅವರ ಕುತ್ತಿಗೆ ಮೇಲೆ ಹೆಚ್ಚಿನ ಭಾರವನ್ನು ಹೇರಿದಂತಾಗುತ್ತದೆ. ಹೀಗಾಗಿ ಮಹಿಳೆಯರು ಕೇವಲ ಮಕ್ಕಳಿಗೆ ಜನ್ಮ ನೀಡಬೇಕಷ್ಟೇ ಎಂದು ಹೇಳಿದ್ದಾರೆ.

ಅಫ್ಘಾನ್ ಸರ್ಕಾರದ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಮಹಿಳಾ ಪ್ರತಿಭಟನಾಕಾರರು ಅಫ್ಘಾನಿಸ್ತಾನದಲ್ಲಿ ಎಲ್ಲ ಮಹಿಳೆಯರನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕಾಬೂಲ್‌ನಲ್ಲಿ ಅಫ್ಘಾನಿಸ್ತಾನದ ಹೊಸ ಮಧ್ಯಂತರ ಸರ್ಕಾರವನ್ನು ವಿರೋಧಿಸುತ್ತಿರುವ ಅಫ್ಘಾನ್ ಮಹಿಳೆಯರು ತಾಲಿಬಾನ್‌ನಿಂದ ದೂರ ಓಡಿಸಲ್ಪಟ್ಟರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ತಾಲಿಬಾನ್ ಭಿನ್ನಮತವನ್ನು ಹತ್ತಿಕ್ಕುವಲ್ಲಿ ಮಹಿಳಾ ಪ್ರತಿಭಟನಾಕಾರರ ವಿರುದ್ಧ ಚಾಟಿ ಮತ್ತು ಲಾಠಿಗಳನ್ನು ಪ್ರಯೋಗ ಮಾಡಲಾಗಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!