Friday, April 26, 2024
Homeಕರಾವಳಿವಿಟ್ಲ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಯುವತಿ!

ವಿಟ್ಲ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಯುವತಿ!

spot_img
- Advertisement -
- Advertisement -

ವಿಟ್ಲ: ನಾಪತ್ತೆಯಾಗಿದ್ದ ಯುವತಿಯೋರ್ವರ ಮೃತದೇಹ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಸಮೀಪವಿರುವ ಕೆರೆಯಲ್ಲಿ ಪತ್ತೆಯಾದ ಘಟನೆ ವಿಟ್ಲ ದಲ್ಲಿ ಇಂದು ನಡೆದಿದೆ.

ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಬಾಬು ನಾಯ್ಕ ರವರ ಪುತ್ರಿ ನಿಶ್ಮಿತಾ(22 ವ.)ಮೃತಪಟ್ಟ ಯುವತಿ. ನಿಶ್ಮಿತರವರು ಡೆಂಟಲ್ ಕ್ಲಿನಿಕ್’ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಸಂಜೆಯಿಂದ ನಿಶ್ಮಿತಾ ಕಾಣೆಯಾಗಿದ್ದು ಇಂದು ಮುಂಜಾನೆ ಕೆರೆಯಲ್ಲಿ ನಿಶ್ಮಿತಾ ರವರ ಮೃತದೇಹ ಪತ್ತೆಯಾಗಿದೆ. ಡೆತ್ ನೋಟ್ ಮತ್ತು ಮೊಬೈಲ್ ಕೂಡ ಮೃತದೇಹ ದೊರೆತ ಸ್ಥಳದಲ್ಲಿ ಪತ್ತೆಯಾಗಿದ್ದು, ಡೆತ್ ನೋಟ್’ನಲ್ಲಿ ಕೆಲವರ ಹೆಸರು ಉಲ್ಲೇಖವಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

- Advertisement -
spot_img

Latest News

error: Content is protected !!