Saturday, May 4, 2024
HomeUncategorizedಕಾರ್ಕಳ: ಲಿಫ್ಟ್ ನಲ್ಲಿ ಸಿಲುಕಿದ್ದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ !

ಕಾರ್ಕಳ: ಲಿಫ್ಟ್ ನಲ್ಲಿ ಸಿಲುಕಿದ್ದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ !

spot_img
- Advertisement -
- Advertisement -

ಕಾರ್ಕಳ: ಮಹಿಳೆಯೊಬ್ಬರು ಪೆವಾರ್ಜೆಯ ಅಪಾರ್ಟೆಂಟ್ ವೊಂದರಲ್ಲಿ ಕೆಟ್ಟು ನಿಂತಿದ್ದ ಲಿಫ್ಟ್ ನಲ್ಲಿ ಸಿಲುಕಿದ್ದರು. ಇವರನ್ನು ರಕ್ಷಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿ ಅಪಾರ್ಟ್ ಮೆಂಟ್ ನ ಅಧ್ಯಕ್ಷ ಲಿಫ್ಟ್ ನಲ್ಲಿ ಸಿಲುಕಿದ್ದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ಕಾರ್ಕಳ ಠಾಣೆಯಲ್ಲಿ ದೂರು ದಾಖಲಾಗಿದೆ .

ಸುಮನ ಆಚಾರ್ಯ ಇಲ್ಲಿನ ಅಪಾರ್ಟಮೆಂಟ್ ವೊಂದರಲ್ಲಿ ನಾಲ್ಕೂವರೆ ವರ್ಷಗಳಿಂದ ವಾಸವಾಗಿದ್ದರು. ಅಪಾರ್ಟ್ ಮೆಂಟ್‌ನ ಮೂರನೇ ಮಹಡಿಯಲ್ಲಿರುವ ತಮ್ಮ ಮನೆಗೆ ಹೋಗುವ ಸಲುವಾಗಿ ಲಿಫ್ಟ್ ಬಳಸಿದ್ದರು . ಈ ವೇಳೆ ಲಿಫ್ಟ್ ಅರ್ಧದಲ್ಲಿಯೇ ನಿಂತಿದ್ದು ಲಿಫ್ಟ್ ನ ತುರ್ತು ಗಂಟೆ ಒತ್ತಿದಾಗ ಪರಿಚಯದ ದಿಶಾ ಮತ್ತು ಅಲ್ಲಿನ ಬಟ್ಟೆ ಅಂಗಡಿಯವರು ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಬಾಗಿಲು ತೆರೆಯಲು ಆಗದ ಕಾರಣ ಅಪಾರ್ಟ್ ಮೆಂಟ್ ನ ಯುವಕನೊರ್ವ ಬಂದು ಅಪಾರ್ಟ್‌ಮೆಂಟ್‌ನ ಅಧ್ಯಕ್ಷರಾದ ಅಪಾದಿತ ಮಹೇಶ ಎಂಬಾತನಿಗೆ ಕರೆ ಮಾಡಿ ಬಾಗಿಲು ತೆರೆಯಲು ಹೇಳಿದ್ದಾರೆ.

ಆದರೆ ಮಹೇಶನು ಬಾರದ ಕಾರಣ ನಂತರ ಯುವಕ ಮತ್ತು ಬಟ್ಟೆ ಅಂಗಡಿಯವರು ಸೇರಿ ಬಾಗಿಲು ತೆರೆದಿದ್ದರು . ಈ ವೇಳೆ ಅಪಾದಿತ ಮಹೇಶ ಮತ್ತು ಆತನ ಹೆಂಡತಿ ರಶ್ಮಿರವರು ಲಿಫ್ಟ್ ಹತ್ತಿರ ಬಂದು ಲಿಫ್ಟ್ ಬಾಗಿಲು ತೆರೆಯಲು ನಿಮಗೆ ಯಾರು ಅನುಮತಿ ನೀಡಿದ್ದು , ಸಿಕ್ಕಿಕೊಂಡವರು ಬೇಕಾದರೆ ಸಾಯಲಿ ಎಂದು ಹೇಳಿದ್ದಲ್ಲದೇ , ನಂತರ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ .

ಈ ಬಗ್ಗೆ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!