Sunday, October 18, 2026
Homeತಾಜಾ ಸುದ್ದಿವಿಟ್ಲ: ಮಹಿಳೆಗೆ ಚೂರಿ ಇರಿದು ಯುವಕ ಪರಾರಿ: ಗಾಯಾಳು ಮಹಿಳೆ ಆಸ್ಪತ್ರೆಗೆ ದಾಖಲು

ವಿಟ್ಲ: ಮಹಿಳೆಗೆ ಚೂರಿ ಇರಿದು ಯುವಕ ಪರಾರಿ: ಗಾಯಾಳು ಮಹಿಳೆ ಆಸ್ಪತ್ರೆಗೆ ದಾಖಲು

- Advertisement -
- Advertisement -

ವಿಟ್ಲ: ಮಹಿಳೆಯ ಮೇಲೆ ಯುವಕನೋರ್ವ ಚೂರಿ ಇರಿದು ಪರಾರಿಯಾದ ಘಟನೆ ನಡೆದಿದೆ. ವಿಟ್ಲದ ಅನಂತಾಡಿಯ ಜನಪ್ರಿಯ ಗಾಡರ್ನ್ ಬಳಿ ಈ ಘಟನೆ ನಡೆದಿದೆ. ಅನಂತಾಡಿ ದೇವಿನಗರ ನಿವಾಸಿ ಶಕುಂತಲಾ ಎಂಬ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿದೆ.

ಚೂರಿ ಇರಿತದಿಂದ ಮಹಿಳೆಗೆ ಗಂಭೀರ ಗಾಯಗಳಾಗಿದೆ. ಸ್ಥಳೀಯರು ಗಾಯಾಳು ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶಕುಂತಲಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದಾರೆ.

ಚೂರಿ ಇರಿತಕ್ಕೆ ಕಾರಣ ಯಾವುದೆಂದು ತಿಳಿದು ಬಂದಿಲ್ಲ. ಹಲ್ಲೆಗೈದ ಯುವಕ ಪೆರಾಜೆ ಕಡೆ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಆ ಯುವಕ ಹಾಗೂ ಮಹಿಳೆ ಇಬ್ಬರೂ ಜಗಳ ಮಾಡಿಕೊಂಡಿದ್ರು ಎನ್ನಲಾಗಿದೆ. ಇನ್ನು ಆರೋಪಿ ಹೋಗಿರುವ ಆಟೋ ನಂಬರ್‌ ಕೂಡಾ ಪೊಲೀಸರಿಗೆ ದೊರೆತಿದೆ.

- Advertisement -

Latest News

error: Content is protected !!