Thursday, June 4, 2026
Homeತಾಜಾ ಸುದ್ದಿಸೆಲ್ಫಿ ತೆಗೆದುಕೊಳ್ಳುವ ಧಾವಂತದಲ್ಲಿ ಕಾಲು ಜಾರಿ ಕಣಿವೆಗೆ ಬಿದ್ದು ಮಹಿಳೆ ಸಾವು!..

ಸೆಲ್ಫಿ ತೆಗೆದುಕೊಳ್ಳುವ ಧಾವಂತದಲ್ಲಿ ಕಾಲು ಜಾರಿ ಕಣಿವೆಗೆ ಬಿದ್ದು ಮಹಿಳೆ ಸಾವು!..

- Advertisement -
- Advertisement -

ಇಂದೋರ್: ಜಾಮ್ ಗೇಟ್ ಪ್ರದೇಶಕ್ಕೆ ತಮ್ಮ ಕುಟುಂಬಸ್ಥರೊಂದಿಗೆ ಪಿಕ್ ನಿಕ್ ಗೆ ತೆರಳಿದ್ದ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳ ಲು ಹೋದ ಮಹಿಳೆ ಕಾಲು ಜಾರಿ ಕಣಿವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತ ಮಹಿಳೆಯನ್ನು ನೀತು ಮಹೇಶ್ವರಿ ಎಂದು ಗುರುತಿಸಲಾಗಿದೆ.ನಾಲ್ಕು ಗಂಟೆಗಳ ತೀವ್ರ ಶೋಧದ ನಂತರ ಮಹಿಳೆ ಶವ ಪತ್ತೆಯಾಯಿತು.

ಜಾಮ್ ಗೇಟ್ ಇಂದೋರ್ ನಿಂದ 55 ಕಿಮೀ ದೂರದಲ್ಲಿದ್ದು ಕುಟುಂಬಸ್ಥರೊಂದಿಗೆ ಪಿಕ್ ನಿಕ್ ಗೆ ತೆರಳಿದ್ದ ಸಂದರ್ಭ ಘಟನೆ ನಡೆದಿದೆ. ಬೆಟ್ಟದ ಮೇಲೆ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಕಣಿವೆಗೆ ಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!