Friday, June 5, 2026
Homeತಾಜಾ ಸುದ್ದಿಸಕಲೇಶಪುರದಲ್ಲಿ ಮಧ್ಯರಾತ್ರಿ ಮನೆ ಬಾಗಿಲು ಮುರಿದು ಒಳ ನುಗ್ಗಿದ ಒಂಟಿ ಸಲಗ

ಸಕಲೇಶಪುರದಲ್ಲಿ ಮಧ್ಯರಾತ್ರಿ ಮನೆ ಬಾಗಿಲು ಮುರಿದು ಒಳ ನುಗ್ಗಿದ ಒಂಟಿ ಸಲಗ

- Advertisement -
- Advertisement -

ಸಕಲೇಶಪುರ: ಒಂಟಿ ಸಲಗವೊಂದು
ಮನೆಯ ಬಾಗಿಲು ಮುರಿದು ಒಳ ನುಗ್ಗಲು ಮುಂದಾದ ಘಟ‌ನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.‌

ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ನಡು ರಾತ್ರಿಯಲ್ಲಿ ಅಹಾರ ಅರಸಿ ಬಂದು ಮನೆಯ ಬಾಗಿಲನ್ನು ಕಾಡಾನೆ ಧ್ವಂಸಗೊಳಿಸಿದೆ.

ಬಾಗಿಲು ತುಂಡಾಗುತ್ತಲೇ ಶಬ್ದಕ್ಕೆ ಗಾಬರಿಯಿಂದ ಮನೆಯಲ್ಲಿದ್ದವರು ಎದ್ದು ಕಾಡಾನೆ ಒಳನುಗ್ಗಲು ಯತ್ನಿಸುತ್ತಿರುವುದನ್ನು ನೋಡಿ ಬೊಬ್ಬೆ ಹೊಡೆದಿದ್ದಾರೆ‌.

ಈ ವೇಳೆಗೆ ಮನೆಯವರ ಕೂಗಾಟದಿಂದ ಗಾಬರಿಯಾಗಿ ಕಾಫಿ ತೋಟದತ್ತ ಕಾಡಾನೆ ಓಡಿ ಹೋಗಿದೆ.

ಸಕಲೇಶಪುರ ತಾಲೂಕಿನ ವಿವಿಧ ಗ್ರಾಮಗಳ ಜನರು ಕಾಡಾನೆ ದಾಳಿಯ ಭೀತಿಯಿಂದ ಪ್ರತಿ ದಿನ ಭಯದಲ್ಲೇ ವಾಸ ಮಾಡುತ್ತಿದ್ದು, ಕಾಡಾನೆ ಹಾವಳಿ ತಡೆಯುವಲ್ಲಿ ವಿಫಲವಾದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- Advertisement -

Latest News

error: Content is protected !!