Saturday, June 6, 2026
Homeಕರಾವಳಿಕಡಬ; ಅಸ್ವಸ್ಥಗೊಂಡಿದ್ದ ಕಾಡಾನೆ ಸಾವು

ಕಡಬ; ಅಸ್ವಸ್ಥಗೊಂಡಿದ್ದ ಕಾಡಾನೆ ಸಾವು

- Advertisement -
- Advertisement -

ಕಡಬ, ಸುಬ್ರಮಣ್ಯ ಪರಿಸರದಲ್ಲಿ ಅಸ್ವಸ್ಥಗೊಂಡು ತಿರುಗಾಡುತ್ತಿದ್ದ ಕಾಡಾನೆ ಸಾವನ್ನಪ್ಪಿದೆ.ಕಡಬ ಸಮೀಪದ ಕೊಂಬಾರು ವ್ಯಾಪ್ತಿಯಲ್ಲಿ ಆನೆ ಮೃತಪಟ್ಟಿದೆ.

ಕಾಡಾನೆ ಸಂಪೂರ್ಣ ನಿತ್ರಾಣಗೊಂಡ ಸ್ಥಿತಿಯಲ್ಲಿ ಕೊಂಬಾರು ಬಳಿ ಹಳ್ಳವೊಂದರಲ್ಲಿ ಪತ್ತೆಯಾಗಿತ್ತು. ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯ ಸಮೀಪದ ಚೇರು ಭಾಗದಲ್ಲಿ ಈ ಕಾಡಾನೆ ಸಂಚಾರ ಮಾಡಿ ಬಳಿಕ ಎರ್ಮಾಯಿಲ್ ಎಂಬಲ್ಲಿ ಮತ್ತೆ ರಸ್ತೆಯಲ್ಲೇ ನಡೆದಾಡಲು ಕಷ್ಟಪಡುತ್ತಿದ್ದದ್ದನ್ನು ಸ್ಥಳೀಯರು ಗಮನಿಸಿದ್ದರು.

ಅರಣ್ಯ ಅಧಿಕಾರಿಗಳ ತಂಡ ಮಾಹಿತಿ ಮಾಹಿತಿ ಲಭ್ಯವಾದ ತಕ್ಷಣವೇ ನುರಿತ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಪರಿಶೀಲನೆಗೆ ಮುಂದಾಗಿದ್ದರು.ಅದರಂತೆ ಹಳ್ಳದಲ್ಲಿ ಕಾಡಾನೆ ಪತ್ತೆಯಾಗಿತ್ತು. ಕೊನೆಗೆ ಅದೇ ಹಳ್ಳದಲ್ಲಿ ಆನೆ ಸಾವನ್ನಪ್ಪಿದೆ.  ಆನೆ ವಯೋ ಸಹಜ ತೊಂದರೆಗಳಿಂದ ಸಾವನ್ನಪ್ಪಿದೆ. ಅದರ  ಹಲ್ಲುಗಳು ಉದುರಿರುವ ಸಾಧ್ಯತೆ ಇದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!