Thursday, June 4, 2026
Homeಕರಾವಳಿಕಡಬದಲ್ಲಿ ಮತ್ತೆ ಕಾಡಾನೆ ದಾಳಿ; ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಎತ್ತಿ ಎಸೆದ ಸಲಗ

ಕಡಬದಲ್ಲಿ ಮತ್ತೆ ಕಾಡಾನೆ ದಾಳಿ; ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಎತ್ತಿ ಎಸೆದ ಸಲಗ

- Advertisement -
- Advertisement -

ಕಡಬ: ಕಾಡಾನೆ ಇಬ್ಬರನ್ನು ಬಲಿ ಪಡೆದ ಘಟನೆ ಮಾಸುವ ಮುನ್ನವೇ ಕಡಬದಲ್ಲಿ ಮತ್ತೆ ಕಾಡಾನೆ ದಾಳಿ ಮಾಡಿದೆ. ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಎತ್ತಿ ಎಸೆದಿದೆ ಕಾಡಾನೆ.

ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ತಲಮತ್ತಡ್ಕ ಮನೆಯ ಬಿಜು ಕುಮಾರ್ ನಡುಮನೆ ಅವರು ಹೋಗುತ್ತಿದ್ದಾಗ ಗೇರು ನಡುತೋಪು ಸಮೀಪ ಮರಿಯಾನೆ ಹೊಂದಿರುವ ಹೆಣ್ಣು ಆನೆ 2:30 ರ ಸುಮಾರಿಗೆ ದಾಳಿ ನಡೆಸಿದೆ ಎನ್ನಲಾಗಿದೆ.  

ಗಾಯಗೊಂಡ ವ್ಯಕ್ತಿಯನ್ನು ಕಡಬ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಮೊದಲೇ ಕಾಡಾನೆ ಭಯದಲ್ಲಿದ್ದ ಸ್ಥಳೀಯರು ಮತ್ತೆ ಕಾಡಾನೆ ದಾಳಿಯಾಗಿರೋದರಂದ ಮನೆಯಿಂದ ಹೊರ ಹೋಗಲು ಹೆದರುವಂತಾಗಿದೆ.

- Advertisement -

Latest News

error: Content is protected !!