ಕಡಬ; ತನ್ನ ಗೆಳೆಯನೊಂದಿಗೆ ಪತ್ನಿ ಮೊಬೈಲ್ ಸಂಪರ್ಕದಲ್ಲಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡಬದ ಕಳಾರ ಎಂಬಲ್ಲಿ ನಡೆದಿದೆ. ರಾಕೇಶ್ (36) ಮೃತ ದುರ್ದೈವಿ.
ಕಡಬ, ಕುಟ್ರುಪ್ಪಾಡಿ ನಿವಾಸಿ ಸೊಲೊಮೊನ್ ಎಂಬವರ ಮಗ ರಾಕೇಶ್ (36) ಎಂಬಾತನು ಕಡಬದ ಕಳಾರ ಎಂಬಲ್ಲಿ ದ್ವಿಚಕ್ರ ವಾಹನಗಳ ಗ್ಯಾರೇಜ್ ಇಟ್ಟುಕೊಂಡಿದ್ದರು. ಅವರ ಆತನ ಪತ್ನಿಯೊಂದಿಗೆ ಅವರ ಗೆಳೆಯನೊಬ್ಬ ಮೊಬೈಲ್ ಪೋನ್ ಮೂಲಕ ಸಂಪರ್ಕದಲ್ಲಿರುವ ವಿಷಯ ತಿಳಿದ ರಾಕೇಶ್ ಮನನುಂ ದಿನಾಂಕ: 19-11-2025 ರಂದು ಸಂಜೆ, ಕಡಬ ಬಜಾಜ್ ಶೋ ರೂಂ ಹಿಂದುಗಡೆ ಅಮಲು ಪದಾರ್ಥದೊಂದಿಗೆ ಇಲಿಪಾಷಾನ ಸೇವಿಸಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದರು. ಕೂಡಲೇ ಅಲ್ಲಿದ್ದವರು ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾ|| ಮುಲ್ಲರ್ ಆಸ್ಪತ್ರೆಗೆ ಅವರ ಸಹೋದರ ರಾಜೇಶ್ ರವರು ದಾಖಲಿಸಿದ್ದರು. ಅಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ರಾಕೇಶ್ ದಿನಾಂಕ:26-11-2025 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಡಬ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


