- Advertisement -
- Advertisement -
ಬೆಳ್ತಂಗಡಿ: ತಾಲೂಕು ಕುವೆಟ್ಟು ಗ್ರಾಮದ ನಿವಾಸಿಯಾದ ಜಬ್ಬಾರ್ ಮದ್ದಡ್ಕರವರು ತನ್ನ ಕಾಲುಗಳ ಸ್ವಾಧೀನ ಕಳೆದುಕೊಂಡು ಎಂಟು ವರ್ಷಗಳಿಂದ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ದಿನ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕರಾದ ಕೆ.ವಸಂತ ಬಂಗೇರರವರು ಮಾನವೀಯ ನೆಲೆಯಲ್ಲಿ ಜಬ್ಬಾರ್ ರವರಿಗೆ ಗಾಲಿಕುರ್ಚಿಯನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಕುವೆಟ್ಟು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಹೈದರ್,ತಾಲೂಕು ಪಂಚಾಯತ್ ಮಾಜಿ ಸದಸ್ಯ ಗೋಪಿನಾಥ್ ನಾಯಕ್,ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಗರ ಅಧ್ಯಕ್ಷರಾದ ಸಲೀಂ ಕುವೆಟ್ಟು,ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅನೂಪ್ ಬಂಗೇರ,ಸಾಮಾಜಿಕ ಜಾಲತಾಣ ಅಧ್ಯಕ್ಷ ಸಂದೀಪ್ ಎಸ್ ನೀರಲ್ಕೆ ಅರ್ವ,ಖಾಸೀಂ ಪಣಕಜೆ ಮತ್ತಿತರರು ಉಪಸ್ಥಿತರಿದ್ದರು
- Advertisement -