- Advertisement -
- Advertisement -
ಕೊರೊನಾ ಬಗ್ಗೆ ವಾಟ್ಸಾಪ್ ನಲ್ಲಿ ತಪ್ಪು ಮಾಹಿತಿ ರವಾನೆಯಾಗುವುದನ್ನು ತಪ್ಪಿಸಲು ಕಂಪನಿ ಫಾರ್ವರ್ಡ್ ಸಂದೇಶ ಕಳುಹಿಸುವ ನಿಯಮದಲ್ಲಿ ಬದಲಾವಣೆ ಮಾಡಿದೆ. ಈ ಹಿಂದೆ ಸಂದೇಶವನ್ನು ಒಂದು ಬಾರಿ ಐದು ಮಂದಿಗೆ ಕಳುಹಿಸಬಹುದಿತ್ತು. ಆದ್ರೆ ಈಗ ಒಬ್ಬರಿಗೆ ಮಾತ್ರ ಸಂದೇಶವನ್ನು ಕಳುಹಿಸಬಹುದು.
ವಾಟ್ಸಾಪ್ ಈ ನಿಯಮವನ್ನು ಜಾಗತಿಕವಾಗಿ ಇಂದಿನಿಂದ ಜಾರಿಗೆ ತಂದಿದೆ. ಇದು ಮಾತ್ರವಲ್ಲ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ವಾಟ್ಸಾಪ್ ಪರಿಶೀಲನೆ ನಡೆಸುತ್ತಿದೆ. ವಾಟ್ಸಾಪ್ ಈ ಬಗ್ಗೆ ಮಾಹಿತಿ ನೀಡಿದೆ. ಆರಂಭದಲ್ಲಿ ಪಾರ್ವರ್ಡ್ ಸಂದೇಶವನ್ನು ಎಷ್ಟು ಮಂದಿಗೆ ಬೇಕಾದ್ರೂ ಒಂದೇ ಬಾರಿ ಕಳುಹಿಸಬಹುದಿತ್ತು. ನಂತ್ರ ವಾಟ್ಸಾಪ್ ಇದ್ರ ಮಿತಿಯನ್ನು ಐದಕ್ಕೆ ಇಳಿಸಿತ್ತು.
ಸಂದೇಶವನ್ನು ಐದಕ್ಕೆ ಇಳಿಸಿದ ನಂತ್ರ ಸಂದೇಶ ಫಾರ್ವರ್ಡ್ ಮಾಡುವುದು ಶೇಕಡಾ 25ರಷ್ಟು ಕಡಿಮೆಯಾಗಿದೆ ಎಂದು ಕಂಪನಿ ಹೇಳಿದೆ.
- Advertisement -