Friday, May 3, 2024
Homeಕರಾವಳಿಉಡುಪಿಮರವಂತೆ: ಬಂಟ್ವಾಡಿ ಕಿಂಡಿ ಅಣೆಕಟ್ಟಿನಿಂದ ಇಳಿಯುತ್ತಿಲ್ಲ ನೆರೆ ನೀರು: ಕಿಂಡಿ ಅಣೆಕಟ್ಟು ನಿರ್ವಹಣೆ ಸಮಸ್ಯೆ ವಿರುದ್ಧ...

ಮರವಂತೆ: ಬಂಟ್ವಾಡಿ ಕಿಂಡಿ ಅಣೆಕಟ್ಟಿನಿಂದ ಇಳಿಯುತ್ತಿಲ್ಲ ನೆರೆ ನೀರು: ಕಿಂಡಿ ಅಣೆಕಟ್ಟು ನಿರ್ವಹಣೆ ಸಮಸ್ಯೆ ವಿರುದ್ಧ ಜನರ ಆಕ್ರೋಶ

spot_img
- Advertisement -
- Advertisement -

ಮರವಂತೆ: ರೈತರ ಅನುಕೂಲಕ್ಕಾಗಿ ದಶಕದ ಹಿಂದೆ ನಿರ್ಮಿಸಿದ ಬಂಟ್ವಾಡಿ ಅಣೆಕಟ್ಟಿನ ನಿರ್ವಹಣೆ ಸಮಸ್ಯೆಯಿಂದ ಈ ಬಾರಿ ಸೌಪರ್ಣಿಕ ನದಿ ಪಾತ್ರದ ಪ್ರದೇಶಗಳಲ್ಲಿ ಮಳೆ ಕಡಿಮೆಯಾದರೂ, ನೆರೆ ನೀರು ಇಳಿಯುತ್ತಿಲ್ಲ. ಈ ಭಾಗದ ನೂರಾರು ಮನೆಗಳ ಜನ ಈ ಕಿಂಡಿ ಅಣೆಕಟ್ಟು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೊಸಾಡು ಗ್ರಾಮದ ಬಂಟ್ವಾಡಿಯಲ್ಲಿ ದಶಕದ ಹಿಂದೆ 12 ಕೋಟಿ ರೂ.ವೆಚ್ಚದಲ್ಲಿ ಮರವಂತೆ, ಕುರು, ಪಡುಕೋಣೆ, ಹಡವು, ಗುಡ್ಡಮ್ಮಾಡಿ ಸೇನಾಪುರ, ಮೊವಾಡಿ, ಬಡಾಕೆರೆ, ಚಿಕ್ಕಳ್ಳಿ, ಆನಗೋಡು ಪ್ರದೇಶದ ಕೃಷಿಕರಿಗೆ ನೀರಾವರಿ ಸೌಲಭ್ಯಕ್ಕಾಗಿ ಸೌಪರ್ಣಿಕಾ ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಆದರೆ ಇದರಿಂದ ರೈತರಿಗೆ, ಸುತ್ತಮುತ್ತಲಿನ ಪರಿಸರದಲ್ಲಿ ನೆಲೆಸಿರುವ ಜನರಿಗೆ ಪ್ರಯೋಜನಕ್ಕಿಂತ ತೊಂದರೆಯೇ ಹೆಚ್ಚಾಗಿದೆ.

ಇಲ್ಲಿನ ಕಿಂಡಿ ಅಣೆಕಟ್ಟಿನ ದೊಡ್ಡ ಕಿಂಡಿಯಲ್ಲಿ 2, ಚಿಕ್ಕ ಕಿಂಡಿಯಲ್ಲಿ 1 ಹಲಗೆ ತಳದಲ್ಲಿ ಹಾಗೆಯೇ ಬಾಕಿ ಉಳಿದು ಕೊಂಡಿದ್ದು, ಇದರಿಂದ ಕಿಂಡಿ ಅಣೆಕಟ್ಟು ಮೇಲ್ಬಾಗದಲ್ಲಿ ಹೂಳು ಶೇಖರಣೆಯಾಗಿ, ನದಿ ಪಾತ್ರದ ಆಳ ತಗ್ಗಿ ಸುತ್ತಮುತ್ತಲ ಪ್ರದೇಶಗಲ್ಲಿ ನೆರೆ ಬರುತ್ತದೆ. ಇನ್ನು 2 ವರ್ಷದ ಹಿಂದೆ 14 ಕಿಂಡಿಗೆ ಅಳವಡಿಸಿದ ಕ್ರಸ್ಟ್ ಗೇಟ್ ಸಹ ಜಾಮ್ ಆಗಿದ್ದು, ಮೇಲಕ್ಕೂ ಏರದೆ ಕೆಳಕ್ಕೂ ಇಳಿಯದೆ, ಮಳೆಗಾದಲ್ಲಿ ನೆರೆ ಉಕ್ಕಲು ಅವಕಾಶ ಮಾಡಿ, ಬೇಸಿಗೆಯಲ್ಲಿ ಸಿಹಿ ನೀರು ಹಿಡಿದಿಡಲು ಸಾಧ್ಯವಾಗದೇ ನಿಷ್ಟ್ರಯೋಜಕವಾಗಿದೆ. ಇದರೊಟ್ಟಿಗೆ ಮಳೆಗೆ ಸೌಪರ್ಣಿಕಾ ನದಿ ಹೊತ್ತು ತರುವ ಕಸಕಡ್ಡಿ, ಮರ ಮಟ್ಟುಗಳೆಲ್ಲ ಅಣೆಕಟ್ಟು ಕಿಂಡಿಯಲ್ಲಿ ಬಾಕಿಯಾಗಿ ನೆರೆ ಏರಲು ಮುಖ್ಯ ಕಾರಣವಾಗಿದೆ. ಈ ಬಗ್ಗೆ ಇಲ್ಲಿನ ರೈತರು, ಸಾರ್ವಜನಿಕರು ಅನೇಕ ಬಾರಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹೇಳಿದರೂ, ಈ ಬಗ್ಗೆ ಗಮನವೇ ಕೊಡುತ್ತಿಲ್ಲ.

ಬಂಟ್ವಾಡಿಯ ಕಿಂಡಿ ಅಣೆಕಟ್ಟಿನ ಅವ್ಯವಸ್ಥೆಯಿಂದಾಗಿ ನಾವುಂದದ ಸಾಲುಡ, ಅರೆಹೊಳೆ, ಕಂಡಿಕೇರಿ, ಬಾಂಗಿನ್ ಮನೆ, ಮರವಂತೆ, ಸೇನಾಪುರ, ಬಡಾಕೆರೆ, ಪಡುಕೋಣೆ, ಹಡವು, ಚಿಕ್ಕಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ನೆರೆಗೆ ತುತ್ತಾಗುತ್ತಿದೆ. ಅದರಲ್ಲೂ ಸಾಲುಡ, ಅರೆಹೊಳೆ, ಚಿಕ್ಕಳ್ಳಿ ಜನರಿಗೆ ಕಳೆದ 15 ದಿನಗಳಿಂದ ಜಲದಿಗ್ಬಂಧನ ವಿಧಿಸಿದಂತಾಗಿದೆ. ಇಲ್ಲೆಲ್ಲ ಪ್ರತಿ ವರ್ಷ ನೆರೆ ಬಂದರೂ, ಮಳೆ ಕಡಿಮೆಯಾದ ಬಳಿಕ ಇಳಿಯುತ್ತಿತ್ತು. ಆದರೆ ಈ ಬಾರಿ ಮಳೆ ಕಡಿಮೆಯಾಗಿ 2 ದಿನ ಕಳೆದರೂ, ನೆರೆ ನೀರು ಮಾತ್ರ ಇಳಿಯುತ್ತಿಲ್ಲ. ಇದರಿಂದಾಗಿ ಚಿಕ್ಕ ಮಳೆಗೂ ನೆರೆ ನೀರು ಹೆಚ್ಚುತ್ತದೆ. ಅದಲ್ಲದೇ ಇಲ್ಲಿನ ಎಕರೆಗಟ್ಟಲೆ ಭತ್ತದ ಕೃಷಿ ನಾಶವಾಗಿದೆ.

- Advertisement -
spot_img

Latest News

error: Content is protected !!