Thursday, June 4, 2026
Homeತಾಜಾ ಸುದ್ದಿಐಪಿಎಸ್ ಅಧಿಕಾರಿ ರೂಪ.ಡಿ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸರ್ಕಾರದಿಂದ ನೋಟಿಸ್ ಜಾರಿ

ಐಪಿಎಸ್ ಅಧಿಕಾರಿ ರೂಪ.ಡಿ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸರ್ಕಾರದಿಂದ ನೋಟಿಸ್ ಜಾರಿ

- Advertisement -
- Advertisement -

ಬೆಂಗಳೂರು: ಐಪಿಎಸ್ ಅಧಿಕಾರಿ ರೂಪ.ಡಿ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದೆ. ನಿಮ್ಮ ಜಗಳದಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ನೀವು ಮಾಧ್ಯಮಗಳ ಮುಂದೆ ಆರೋಪ, ಪ್ರತ್ಯಾರೋಪ ಮಾಡಿದ್ದು ಸರಿಯಲ್ಲ. ಇಬ್ಬರು ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧರಾಗಿರಬೇಕು ಎಂದು ರಾಜ್ಯ ಸರ್ಕಾರ ನೋಟಿಸ್ ನಲ್ಲಿ ರೂಪಾ ಹಾಗೂ ಸಿಂಧೂರಿಗೆ ಖಡಕ್ ಎಚ್ಚರಿಕೆ ನೀಡಿದೆ.

ಇಂದು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಅವರು ಐಪಿಎಸ್ ಅಧಿಕಾರಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಿಎಂ ಬೊಮ್ಮಾಯಿ ಅವರ ಸೂಚನೆ ಮೇರೆಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಅವರು ಐಪಿಎಸ್ ರೂಪ ಹಾಗೂ ಐಎಎಸ್ ರೋಹಿಣಿ ಸಿಂಧೂರಿ ಅವರಿಗೆ ನೀಡಿರುವಂತ ನೋಟಿಸ್ ನಲ್ಲಿ ನಿಮ್ಮ ದೂರುಗಳನ್ನು ಸರ್ಕಾರದ ಮುಂದೆ ಹೇಳಿ. ಅದರನ್ನು ಬಿಟ್ಟು ಬಹಿರಂಗವಾಗಿ ಆರೋಪ-ಪ್ರತ್ಯಾರೋಹ ಸರಿಯಲ್ಲ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ. ಎಚ್ಚರಿಕೆಯನ್ನು ಮೀರಿದ್ರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಎಚ್ಚರಿಸಲಾಗಿದೆ.

- Advertisement -

Latest News

error: Content is protected !!