ಮಂಗಳೂರು : ಕಾವೂರು ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣ, 2022 ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 2023 ರಲ್ಲಿ ದಾಖಲಾಗಿದ್ದ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಒಂದೂವರೆ ವರ್ಷದಿಂದ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಮುಗುಳಿ ಹೊಸಮನೆ ನಿವಾಸಿ ತಿಮ್ಮಪ್ಪ ಶೆಟ್ಟಿ ಮಗ ದಿನೇಶ್ ಶೆಟ್ಟಿ @ ದಿನ್ನು ನನ್ನು ಮಂಗಳೂರು ಎಸಿಪಿ ಉತ್ತರ ಉಪವಿಭಾಗ ಹಾಗೂ ಅವರ ತಂಡ ನ.25 ರಂದು ಬಂಧಿಸಿದ್ದಾರೆ.
ಇನ್ನು ಭೂಗತ ಲೋಕದ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೊಗೀಶ್ ರವರಿಂದ ಸುಪಾರಿ ಪಡೆದು ನ್ಯಾಯವಾದಿ ಖಾಸೀಂ ನೌಷಾದ್ ನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಈತನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದರಲ್ಲಿ 11 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿ ನಂತರ ಉಚ್ಛ ನ್ಯಾಯಾಲಯಕ್ಕೆ ಅಫೀಲು ಸಲ್ಲಿಸಿ ಡಿಸೆಂಬರ್ 2019 ರಲ್ಲಿ ಬಿಡುಗಡೆಗೊಂಡಿದ್ದ. ಇದೀಗ ಕೋರ್ಟ್ ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ದಿನೇಶ್ ಶೆಟ್ಟಿ ಮತ್ತೆ ಜೈಲು ಸೇರಿದ್ದಾನೆ.


