ಉಡುಪಿ: ಹಿಂದು ಜಾಗರಣಾ ವೇದಿಕೆ ಬೆಳ್ಮಣ್ ವಲಯ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ ಉಡುಪಿ, ಆದರ್ಶ ಪ್ರೆಂಡ್ಸ್ ಮಕ್ಕೇರಿಬೈಲು ಸೂಡ,ಐಸಿರಿ ವೃಂದ ಕುಂಬ್ಳೆ ಸೂಡ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಸೋಮವಾರದಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂಡದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಜಿಲ್ಲಾಧ್ಯಕ್ಷರು ಅಭಯಹಸ್ತ ಚಾರಿಟೇಬಲ್ ಟ್ರಸ್ ರಿ ಉಡುಪಿಯ ಸತೀಶ್ ಸಾಲ್ಯಾನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೂಡದಂತಹ ಗ್ರಾಮೀಣ ಪ್ರದೇಶದಲ್ಲಿ ರಕ್ತದಾನಿಗಳನ್ನು ಒಟ್ಟುಗೂಡಿಸಿ ರಕ್ತದಾನಕ್ಕೆ ಪ್ರೇರೆಪಿಸಿ ರಕ್ತದಾನ ಶಿಬಿರವನ್ನು ಆಯೋಜಿಸುವುದು ಅತೀ ಕಷ್ಟದ ಕೆಲಸ ಆದರೆ ಇದಕ್ಕೆ ಅಪವಾದ ಎನ್ನುವಂತೆ ಹಿಂದು ಜಾಗರಣ ವೇದಿಕೆಯಂತಹ ಸಂಘಟನೆಗಳು ಇತರ ಸಂಘಟನೆಗಳ ಸಹಕಾರದಲ್ಲಿ ಕಳೆದ ಎರಡು ವರ್ಷಗಳಿಂದ ಗ್ರಾಮಾಂತರ ಭಾಗದಲ್ಲಿ ಕೂಡ ರಕ್ತದಾನ ಶಿಬಿರ ಆಯೋಜಿಸಿ ಯಶಸ್ವಿಯಾಗಿವೆ ಎಂದರು. ಈ ಕಾರ್ಯಕ್ರಮದಲ್ಲಿ 60 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು

ಬೆಳ್ಮಣ್ಣು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಹನಾ ಕುಂದರ್ ಸೂಡ ಸಭಾ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಯುವಜನ ಸೇವಾ ಕ್ರೀಡಾ ಅಧಿಕಾರಿ ರಿತೇಶ್ ಶೆಟ್ಟಿ ಸೂಡ, ಹಿಂಜಾವೇ ಉಡುಪಿ ಜಿಲ್ಲೆ ನಿಧಿ ಪ್ರಮುಖ್ ಉಮೇಶ್ ನಾಯ್ಕ್ ಸೂಡ, ಗೌರವ ಸಲಹೆಗಾರರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ ಉಡುಪಿ ದೇವದಾಸ್ ಪಾಟ್ಕರ್, ಆದರ್ಶ್ ಪ್ರೆಂಡ್ಸ್ ಮಕ್ಕೇರಿಬೈಲು ಸೂಡದ ಉಪಾಧ್ಯಕ್ಷರು ಚಂದ್ರನಾಥ್ ಶೆಟ್ಟಿ, ಹಿಂಜಾವೇ ಮಾತೃಶಕ್ತಿ ಘಟಕ ಬೆಳ್ಮಣ್ ವಲಯದ ಅಧ್ಯಕ್ಷರು ಸುಜತಾ ಶೆಟ್ಟಿ,ವೈದ್ಯರು ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಡಾ.ಬೆಮ್ಮಇವರು ಉಪಸ್ಥಿತರಿದ್ದರು.
ಚರಣ್ ಸೂಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ,ಗುರುಪ್ರಸಾದ್ ಸೂಡ ಧನ್ಯವಾದ ಅರ್ಪಿಸಿದರು.