Saturday, June 6, 2026
Homeಕರಾವಳಿಮಂಗಳೂರು: ನಗರದಲ್ಲಿ ಸ್ಥಗಿತಗೊಂಡಿದ್ದ ನೀರು ಸರಬರಾಜು ‌ಇಂದಿನಿಂದ ಆರಂಭ!

ಮಂಗಳೂರು: ನಗರದಲ್ಲಿ ಸ್ಥಗಿತಗೊಂಡಿದ್ದ ನೀರು ಸರಬರಾಜು ‌ಇಂದಿನಿಂದ ಆರಂಭ!

- Advertisement -
- Advertisement -

ಮಂಗಳೂರು: ನಗರದಲ್ಲಿ ಸ್ಥಗಿತಗೊಂಡಿರುವ ನೀರು ಸರಬರಾಜು ಇಂದಿನಿಂದ ಪುನರಾರಂಭಗೊಳ್ಳಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಇಂದು ತಿಳಿಸಿದೆ.

ಟ್ವಿಟರ್‌ನಲ್ಲಿ ಸುದ್ದಿಯನ್ನು ಪ್ರಕಟಿಸಿದ ಮಂಗಳೂರು ಸಿಟಿ ಕಾರ್ಪೊರೇಶನ್ ನ ‘ಗುರುವಾರ ರಾತ್ರಿ, ನುರಿತ ಕಾರ್ಮಿಕರು ತುಂಬೆಯಲ್ಲಿ ಸೋರಿಕೆಯಾಗುತ್ತಿದ್ದ ನೀರಿನ ಪೈಪ್‌ಲೈನ್‌ನನ್ನು ಸರಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.



ಇಂದು ಮಂಗಳೂರಿಗೆ ನಿಯಮಿತವಾಗಿ ನೀರು ಸರಬರಾಜು ಪುನರಾರಂಭವಾಗಲಿದೆ ‘ ಎಂದು ಟ್ವೀಟ್ ಮಾಡಿದೆ.

ನವೆಂಬರ್ 3 ರಂದು, ಅಡ್ಯಾರ್ ಕಟ್ಟೆ ಬಳಿ ಮುಖ್ಯ ಸರಬರಾಜು ಪೈಪ್‌ನಲ್ಲಿ ಸೋರಿಕೆ ಕಂಡುಬಂದಿತ್ತು ಎಂದು ನಗರ ಪಾಲಿಕೆ ತನ್ನ ನಿವಾಸಿಗಳಿಗೆ ತಿಳಿಸಿತ್ತು. ದುರಸ್ಥಿ ಕಾರ್ಯಕ್ಕಾಗಿ ತುಂಬೆ ಪಂಪಿಂಗ್ ಸ್ಟೇಷನ್ ಬಂದ್ ಮಾಡಬೇಕಿತ್ತು.‌ ತುಂಬೆಯಿಂದ ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಅಡ್ಯಾರ್ ಕಟ್ಟೆ ಬಳಿ ಹಾಳಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿತ್ತು.

- Advertisement -

Latest News

error: Content is protected !!