Sunday, February 16, 2025
Homeಕರಾವಳಿಶಿವ ಫ್ರೆಂಡ್ಸ್ ಕುರಾಯ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ, ಮುಕ್ತ ಮಹಿಳೆಯರ ತ್ರೋಬಾಲ್ ಹಾಗೂ ಹಗ್ಗಜಗ್ಗಾಟ

ಶಿವ ಫ್ರೆಂಡ್ಸ್ ಕುರಾಯ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ, ಮುಕ್ತ ಮಹಿಳೆಯರ ತ್ರೋಬಾಲ್ ಹಾಗೂ ಹಗ್ಗಜಗ್ಗಾಟ

spot_img
- Advertisement -
- Advertisement -

ಬೆಳ್ತಂಗಡಿ: ಶಿವ ಫ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ – ಬಂದಾರು ಇದರ ಆಶ್ರಯದಲ್ಲಿ 9 ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಮುಕ್ತ ಮಹಿಳೆಯರ ತ್ರೋಬಾಲ್, ಪುರುಷರ ಮತ್ತು ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆಯು ಡಿಸೆಂಬರ್ 15 ಭಾನುವಾರದಂದು ಶಿವಫ್ರೆಂಡ್ಸ್ ಕ್ರೀಡಾಂಗಣ ಖಂಡಿಗ – ಮೈರೋಳ್ತಡ್ಕ ದಲ್ಲಿ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕುರಾಯ ಶಿವ ಫ್ರೆಂಡ್ಸ್ ಅಧ್ಯಕ್ಷರಾದ ಸುಂದರ ಗೌಡ ಖಂಡಿಗ ಅವರು ವಹಿಸಿದ್ದರು 

ಈ ಸಂದರ್ಭದಲ್ಲಿ ಪದ್ಮುಂಜದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಹಾಗೂ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಣಾಧಿಕಾರಿ ರಘುಪತಿ ಭಟ್ ಅನಾಬೆ, ಬಂದಾರು ಗ್ರಾಮ ಪಂಚಾಯತಿನ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಹಾಗೂ ಹಾಲಿ ಅಧ್ಯಕ್ಷ ಹಾಗೂ ಸದಸ್ಯರಾದ ಶ್ರೀಮತಿ ಪರಮೇಶ್ವರಿ ಕೆ. ಗೌಡ, ಮಂಗಳೂರಿನ ಮೆಸ್ಕಾಂ ಇಲಾಖೆಯ ಸಂದೀಪ್ ಎಂ ಮಿತ್ತೂರು, ಪದ್ಮುಂಜ ಸಿ ಎ ಬ್ಯಾಂಕ್ ನಿರ್ದೇಶಕರಾದ ಅಶೋಕ ಗೌಡ ಪಾಂಜಾಳ, ದಿನೇಶ್ ಗೌಡ ದಾಸರಕೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. 

ಯುವ ಗಾಯಕಿ ಪೆರ್ಲ ಬೈಪಾಡಿಯ ಕು. ಕುಸುಮ ಎಂ ಎಸ್ ನೆರೋಲ್ದಪಲ್ಕೆ, ಯುವ ಕವಿ ಶ್ರೀರಾಮನಗರ ಬಂದಾರಿನ ಚಂದ್ರಹಾಸ ಕುಂಬಾರ, ಸೀನಿಯರ್ ಹಾಗೂ ಜೂನಿಯರ್ ವಿಭಾಗದಲ್ಲಿ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಚಿನ್ನದ ಪದಕ ವಿಜೇತೆ ಕು. ತೇಜಸ್ವಿನಿ ಪೂಜಾರಿ ಬೊಲ್ಜೆ, ಶ್ರೇಯಸ್ ಬೆಂಗಾಯಿ ರಾಷ್ಟ ಮಟ್ಟದ ಕ್ರೀಡಾಪಟು, ಇವರಿಗೆ ಸನ್ಮಾನ ಹಾಗೂ ಸಂದೀಪ್ ಎಂ ಮಿತ್ತೂರು ಮೆಸ್ಕಾಂ ಸಿಬ್ಬಂದಿ ಇವರಿಗೆ ಬೀಳ್ಕೊಡುಗೆ  ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಡೆಸಲಾಯಿತು.  

ಶಿವಫ್ರೆಂಡ್ಸ್ ಸದಸ್ಯರೆಲ್ಲರೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

- Advertisement -
spot_img

Latest News

error: Content is protected !!