Thursday, June 4, 2026
Homeಕರಾವಳಿವಿಟ್ಲ: ಬಾಲಕಿಗೆ ವಾಟ್ಸಾಪ್ ನಲ್ಲಿ ಅಶ್ಲೀಲ ಸಂದೇಶ ರವಾನೆ, 16ರ ಹರೆಯದ ಬಾಲಕನ ವಿರುದ್ದ ಪೋಕ್ಸೋ...

ವಿಟ್ಲ: ಬಾಲಕಿಗೆ ವಾಟ್ಸಾಪ್ ನಲ್ಲಿ ಅಶ್ಲೀಲ ಸಂದೇಶ ರವಾನೆ, 16ರ ಹರೆಯದ ಬಾಲಕನ ವಿರುದ್ದ ಪೋಕ್ಸೋ ಪ್ರಕರಣ

- Advertisement -
- Advertisement -

ವಿಟ್ಲ: ಕೆಲ ದಿನಗಳ ಹಿಂದೆ (ಮೇ.27) ಕರಾವಳಿಯಲ್ಲಿ ಬಾಲಕನಿಗೆ ಹಲ್ಲೆ ಮಾಡುವ ವಿಡಿಯೋ ಒಂದು ವೈರಲ್ ಆಗಿತ್ತು. ಆ ಘಟನೆಯನ್ನು ಕೋಮು ಸಂಘರ್ಷದಂತೆ ಬಿಂಬಿಸಲಾಗಿತ್ತು. ಆದರೆ ಆ ಘಟನೆಗೆ ಈಗ ನಿಜ ಕಾರಣ ಬಯಲಾಗಿದೆ. ಹಲ್ಲೆಗೊಳಗಾದ 16 ವರ್ಷ ಪ್ರಾಯದ ಅಪ್ರಾಪ್ತ ಬಾಲಕ ಅಶ್ಲೀಲ ಸಂದೇಶ ರವಾನೆ ಮಾಡಿದ್ದೂ ಅಲ್ಲದೆ, ಬೆದರಿಕೆ ಹಾಕಿದ ಬಗ್ಗೆ ಬಾಲಕಿ ನೀಡಿದ ದೂರಿನ ಹಿನ್ನಲೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಕೊಳ್ನಾಡು ಗ್ರಾಮದ ಕಾಡು ಮಠ ಪ್ರೌಢ ಶಾಲಾ ಮೈದಾನದಲ್ಲಿ ನಾಲ್ಕು ಮಂದಿಯಿಂದ ಹಲ್ಲೆಗೊಳಾದ 16 ವರ್ಷದ ಬಾಲಕ ಕಾನೂನು ಸಂಘರ್ಷಕ್ಕೊಳಗಾಗಿದ್ದಾನೆ. ಬಾಲಕಿಗೆ ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನಲೆಯಲ್ಲಿ ಕನ್ಯಾನ ದಿನೇಶ ಸೇರಿ ನಾಲ್ಕು ಮಂದಿ ಎಪ್ರಿಲ್ 21ರಂದು ಬಾಲಕನಿಗೆ ಹಲ್ಲೆ ನಡೆಸಿದ್ದರು.

ಬಳಿಕ ಮೇ.27ರಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಮೇ.28ರಂದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೂ.2ರಂದು ಬಾಲಕಿ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ. ಬಾಲಕನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

- Advertisement -

Latest News

error: Content is protected !!