Friday, May 17, 2024
Homeತಾಜಾ ಸುದ್ದಿಪಿ.ಚಿದಂಬರಂ ಮತ್ತು ಪುತ್ರನ ವಿರುದ್ಧ ಜಾರಿ ನಿರ್ದೇಶನಾಲಯದ ಚಾರ್ಜ್‌ಶೀಟ್ : ಐಎನ್‌ಎಕ್ಸ್ ಮೀಡಿಯಾ ಪ್ರಕರಣ

ಪಿ.ಚಿದಂಬರಂ ಮತ್ತು ಪುತ್ರನ ವಿರುದ್ಧ ಜಾರಿ ನಿರ್ದೇಶನಾಲಯದ ಚಾರ್ಜ್‌ಶೀಟ್ : ಐಎನ್‌ಎಕ್ಸ್ ಮೀಡಿಯಾ ಪ್ರಕರಣ

spot_img
- Advertisement -
- Advertisement -

ನವದೆಹಲಿ: ಐಎನ್‌ಎಕ್ಸ್ ಮೀಡಿಯಾದಿಂದ ಲಂಚ ಪಡೆದ ಹಗರಣಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ ಮತ್ತು ಇತರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಅಂತ ಜಾರಿ ನಿರ್ದೇಶನಾಲಯ ಇಲಾಖೆ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು, ಸಿಬಿಐ, ಚಿದಂಬರಂ ಮತ್ತು ಇತರರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿತ್ತು.
2007 ರಲ್ಲಿ, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ಪಿ ಚಿದಂಬರಂ ಅವರು ಐಎನ್‌ಎಕ್ಸ್ ಮೀಡಿಯಾಕ್ಕೆ ವಿದೇಶಿ ಹಣವನ್ನು ಭಾರಿ ಪ್ರಮಾಣದಲ್ಲಿ ವರ್ಗಾವಣೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದರು ಎಂಬ ಆರೋಪವಿದೆ . ಮಾತ್ರವಲ್ಲದೇ ಅವರ ಮಗ ಕಾರ್ತಿ ಚಿದಂಬರಂ ಈ ಒಪ್ಪಂದಕ್ಕೆ ಕಿಕ್‌ಬ್ಯಾಕ್ ಪಡೆದಿದ್ದರೆಂದು ತನಿಖಾಧಿಕಾರಿಗಳು ಆರೋಪಿಸಿದ್ದರು.
ಇನ್ನು ಈ ವಿಚಾರದ ಸಲುವಾಗಿ ಚಾರ್ಜ್​ಶೀಟ್​ ಸಲ್ಲಿಸಿರುವ ಜಾರಿ ನಿರ್ದೇಶನಾಲಯ, ಪಿ. ಚಿದಂಬರಂ ಮತ್ತು ಅವರ ಮಗ, ಕಿಕ್​ಬ್ಯಾಕ್​ನಿಂದ ಬಂದ ಹಣವನ್ನು ಇಂಗ್ಲೆಂಡ್​ ಮತ್ತು ಸ್ಪೇನ್‌ನಲ್ಲಿ ಆಸ್ತಿ ಖರೀದಿಸಲು ಬಳಸಿದ್ದಾರೆ ಅಂತ ತಿಳಿಸಿದೆ.

- Advertisement -
spot_img

Latest News

error: Content is protected !!