ಚಾರ್ಮಾಡಿ: ಚಾರ್ಮಾಡಿ ವಿಶ್ವಹಿಂದು ಪರಿಷತ್ ವತಿಯಿಂದ ನಿರ್ಮಿಸಿದ ನೂತನ ಗೃಹ ಶ್ರೀರಾಮ ನಿವಾಸವನ್ನು ತಾಲೂಕು ವಿಶ್ವಹಿಂದು ಪರಿಷತ್ ಅಧ್ಯಕ್ಷ ನ್ಯಾಯವಾದಿ ಅಗರ್ತ ಸುಬ್ರಹ್ಮಣ್ಯ ಕುಮಾರ್ ದೀಪ ಬೆಳಗಿಸಿ ಗೃಹ ಪ್ರವೇಶವನ್ನು ಜು.4ರಂದು ನೆರವೇರಿಸಿದರು.

ಚಾರ್ಮಾಡಿ ವಿಶ್ವಹಿಂದು ಪರಿಷತ್ ವತಿಯಿಂದ ದಾನಿಗಳ ಹಾಗೂ ವಿಶ್ವ ಹಿಂದು ಪರಿಷತ್‌ನ ಯುವಕರು ಒಟ್ಟು ಸೇರಿ ರೂ.6 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಭಾರಿ ಪ್ರಸಂಶೆಗೆ ಪಾತ್ರರಾಗಿದ್ದಾರೆ. ಪ್ರಸಾದ್ ದಂಪತಿಗಳಿಗೆ ನಿರ್ಮಿಸಿಕೊಟ್ಟ ಮನೆ ಕೇವಲ 3 ತಿಂಗಳಲ್ಲಿ ಆಗಿದೆ. ವಾಸಕ್ಕೆ ಸೂರಿಲ್ಲದ ಪ್ರಸಾದ್ ದಂಪತಿಗೆ ಸೂರು ನಿರ್ಮಿಸಿದ ಎಲ್ಲರಿಗೂ ಪ್ರಸಾದ್ ಕೃತಜ್ಞತೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ, ಜಿಲ್ಲಾ ಭಜರಂಗದಳ ಸಂಚಾಲಕ ಭಾಸ್ಕರ, ಧರ್ಮಸ್ಥಳ ತಾಲೂಕು ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ನವೀನ್ ನೆರಿಯ, ತಾಲೂಕು ಗೋರಕ್ಷ ಸಂಚಾಲಕ ದಿನೇಶ್ ಚಾರ್ಮಾಡಿ, ಮಾಜಿ ಚಾರ್ಮಾಡಿ ಪಂಚಾಯತ್ ಅಧ್ಯಕ್ಷರುಗಳಾದ ಅಶೋಕ್ ಕುಮಾರ್ ಜೈನ್, ಶ್ರೀಮತಿ ಶಾರದಾ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಕಾಶ್ ಹೊಸಮಠ, ಮಾಜಿ ಅಧ್ಯಕ್ಷ ಕೋಡಿಹಿತ್ತಿಲು ಕೃಷ್ಣಭಟ್ ಉಜಿರೆ ಬೆಳಕು ವಿನಯಚಂದ್ರ, ಅಡಿಮಾರು ಬಾಲಕೃಷ್ಣ ಗೌಡ, ಅಖಿಲೇಶ್ ಭಟ್ ಚಾರ್ಮಾಡಿ.ರಥಬೀದಿ ಸುಧೀರ್, ಗೃಹನಿರ್ಮಾಣದ ಪ್ರೇರಣ ಶಕ್ತಿಗಳಾದ ಅಧ್ಯಕ್ಷ ಜಗದೀಶ, ಉಪಾಧ್ಯಕ್ಷ ಪವನ್ ರಾವ್, ಕಾರ್ಯದರ್ಶಿ ದಿವಿನೇಶ್, ಖಾಜಾಂಚಿ ಸುಧೀರ್ ಹಾಗೂ ಊರವರು ದಾನಿಗಳು ಉಪಸ್ಥಿತರಿದ್ದರು.