- Advertisement -
- Advertisement -
ಬೆಳ್ತಂಗಡಿ: ಕಿಡಿಗೇಡಿಗಳು ಶಾಲೆಯ ಆವರಣಕ್ಕೆ ನುಗ್ಗಿ ಶಾಲಾ ಸ್ವತ್ತುಗಳನ್ನು ದ್ವಂಸಗೊಳಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯ ಆವರಣದೊಳಗೆ ನುಗ್ಗಿದ ದುಷ್ಕರ್ಮಿಗಳು ಶಾಲೆಯ ನಲಿಕಲಿ ತರಗತಿಯ ಕಲಿಕಾ ಸಾಮಾಗ್ರಿಗಳನ್ನು ಹಾಗೂ ಕಿಟಕಿಯ ಗಾಜನ್ನು ಪುಡಿಪುಡಿಗೈದು , ಶಾಲಾ ನೋಟೀಸು ಬೋರ್ಡನ್ನೂ ಧ್ವಂಸಗೊಳಿಸಿದ್ದಾರೆ . ಜೊತೆಗೆ ಶಾಲೆಗೆ ನೀರು ಸರಬರಾಜು ಮಾಡುವ ಪೈಪ್ ಗಳನ್ನು ಕತ್ತರಿಸಿದ ಕಿಡಿಗೇಡಿಗಳು, ಶಾಲಾ ಕೈತೋಟಕ್ಕೆ ಅಳವಡಿಸಲಾದ ಕಬ್ಬಿಣದ ಬೇಲಿಯನ್ನೂ ಮುರಿದು, ನೀರಿನ ಟ್ಯಾಂಕ್ ನ ಮುಚ್ಚಳವನ್ನೂ ತೆರೆದಿಟ್ಟು ಹೋಗಿದ್ದಾರೆ.
ಶಾಲೆಯ ಶಿಕ್ಷಕರು , ಹಾಗೂ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಕ್ರತ್ಯ ಗೊತ್ತಾಗಿದ್ದು ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು , ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -