- Advertisement -
![]()
- Advertisement -
ಕೊಪ್ಪಳ: ಯುವಕರ ಭವಿಷ್ಯದ ದೃಷ್ಟಿಯಿಂದ ಗ್ರಾಮದಲ್ಲಿ ಮದ್ಯ ಮಾರಾಟ ಮತ್ತು ಇಸ್ಪೀಟ್ ಆಟದ ದಂಧೆಯನ್ನು ತಡೆಗಟ್ಟಲು ಗ್ರಾಮಸ್ಥರೇ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮಸ್ಥರು ಈ ನಿರ್ಧಾರ ತೆಗೆದುಕೊಂಡಿದ್ದು, ಗ್ರಾಮದಲ್ಲಿ ಮದ್ಯ ಮಾರಿದರೆ ಒಂದು ಲಕ್ಷ ರೂಪಾಯಿ ದಂಡ ಮತ್ತು ಇಸ್ಪೀಟ್ ಕಾರ್ಡ್ ಮಾರಾಟ ಮಾಡಿದರೆ 25 ಸಾವಿರ ರೂಪಾಯಿ ದಂಡ ವಿಧಿಸುವ ತೀರ್ಮಾನ ಮಾಡಿದ್ದಾರೆ.
ತಾಲೂಕಿನ ಕೆಲವು ಗ್ರಾಮಗಳಲ್ಲಿ ಯಾರಾದರೂ ಮೃತರಾದರೆ ಜೂಜಾಟ ಆಡುವ ಪದ್ದತಿ ಇದ್ದು, ಬಿನ್ನಾಳ ಗ್ರಾಮದಲ್ಲಿ ಅದಕ್ಕೂ ನಿರ್ಬಂಧ ವಿಧಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬಿನ್ನಾಳ ಗ್ರಾಮದ ದೇವಸ್ಥಾನದಲ್ಲಿ ಸಭೆ ಸೇರಿ ಒಟ್ಟಾಗಿ ಗ್ರಾಮಸ್ಥರು ಈ ಸಮಾಜಮುಖಿ ನಿರ್ಣಯ ಕೈಗೊಂಡಿದ್ದಾರೆ.
- Advertisement -


