- Advertisement -
![]()
- Advertisement -
ಮಾಣಿ: ಉಸಿರಾಟದ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಶ್ವೇತಾ ಎಂಬ ಹುಡುಗಿಯನ್ನು ಯಾವುದೇ ಝೀರೋ ಟ್ರಾಫಿಕ್ ಇಲ್ಲದೆ ಮಾಣಿ ಬುಡೋಲಿಯಿಂದ ಪುತ್ತೂರು ಚೇತನ ಆಸ್ಪತ್ರೆಗೆ ಅತಿ ವೇಗವಾಗಿ ತಲುಪಿಸಿ ವಿಕ್ಕಿ ಶೆಟ್ಟಿ ಮಾಣಿಯವರು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಶುಕ್ರವಾರ ಸಂಜೆ ಬುಡೋಲಿ ನಿವಾಸಿ ಶ್ವೇತಾ ಅವರು ಉಸಿರಾಟದ ತೊಂದೆರೆಯಿಂದ ಗಂಭೀರ ಸ್ಥಿತಿಯಲ್ಲಿದ್ದಾಗ ತಮ್ಮ ಪ್ರಾಣದ ಹಂಗು ತೊರೆದು ಪುತ್ತೂರಿನ ಚೇತನಾ ಆಸ್ಪತ್ರೆಗೆ ತಮ್ಮದೇ ಕಾರಿನಲ್ಲಿ ಮಾಣಿ ಬುಡೋಲಿ ಯಿಂದ ಪುತ್ತೂರಿನ ಚೇತನಾ ಆಸ್ಪತ್ರೆಗೆ ಸುಮಾರು 19 ಕಿ.ಮೀ ದೂರವನ್ನು ಕೇವಲ 8.5 ನಿಮಿಷಗಳಲ್ಲಿ ಕ್ರಮಿಸಿ ಗಂಭೀರ ಸ್ಥಿತಿಯಲ್ಲಿದ್ದ ಶ್ವೇತಾ ಅವರನ್ನು ಆಸ್ಪತ್ರೆಗೆ ಮುಟ್ಟಿಸುವಲ್ಲಿ ಸಫಲರಾಗುವ ಮೂಲಕ ಒಂದು ಕುಟುಂಬದ ಮನಸ್ಸಿನಲ್ಲಿ ಶಾಶ್ವತವಾಗಿ ನೆನಪುಳಿಯುವಂತಹ ಕೆಲಸ ಮಾಡಿ ಸಮಾಜಕ್ಕೆ ಮಾದರಿ ಆಗಿದ್ದಾರೆ.
- Advertisement -


