Saturday, June 6, 2026
Homeಕರಾವಳಿಮಾರ್ಚ್ 11 ರಂದು ಪುತ್ತೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ

ಮಾರ್ಚ್ 11 ರಂದು ಪುತ್ತೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ

- Advertisement -
- Advertisement -

ಪುತ್ತೂರು: ಮಾರ್ಚ್ 11 ರಂದು ಸಂಜೆ 5 ಗಂಟೆಗೆ ಪುತ್ತೂರಿನ ವೆಂಕಟರಮಣ ದೇವಸ್ಥಾನದ ಪಕ್ಕದ ಮೈದಾನದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಹೇಳಿದ್ದಾರೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಒಟ್ಟು ನಾಲ್ಕು ತಂಡಗಳ ಮೂಲಕ ಹೊರಡಲಿದ್ದು,ಮಾರ್ಚ್ 1 ರಂದು ಮಲೈ ಮಹಾದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆಯನ್ನು ನೀಡಿದ್ದಾರೆ.

ಇವುಗಳಲ್ಲಿ ಒಂದು ತಂಡ ಮಾರ್ಚ್ 11 ರಂದು ಪುತ್ತೂರು ತಲುಪಲಿದೆ. ಈ ತಂಡದಲ್ಲಿ ಬಿಜೆಪಿ ರಾಜ್ಯ ಮುಖಂಡರಾದ ಆರ್.ಆಶೋಕ್, ಕೆ.ಎಸ್.ಈಶ್ವರಪ್ಪ, ಸುನಿಲ್ ಕುಮಾರ್,ಕೋಟಾ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ ಮೊದಲಾದ ಸಚಿವರು ಇರಲಿದ್ದಾರೆ ಎಂದಿದ್ದಾರೆ. ಪ್ರತೀ ಬೂತ್ ನಿಂದ 100 ಮಂದಿಯಂತೆ ಜನ ಆಗಲಿಸಲಿದ್ದು, ಒಟ್ಟು 20 ಸಾವಿರದಷ್ಟು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!