Tuesday, June 18, 2024
Homeತಾಜಾ ಸುದ್ದಿಪತಿಯ ಕೆಲಸದಿಂದ ತಲೆ ತಗ್ಗಿಸಿದ ಡಿ ಬಾಸ್ ಪತ್ನಿ; ಇನ್ಸ್ಟಾಗ್ರಾಂನಲ್ಲಿ ಡಿಪಿ ತೆಗೆದು ದರ್ಶನ್ ರನ್ನು...

ಪತಿಯ ಕೆಲಸದಿಂದ ತಲೆ ತಗ್ಗಿಸಿದ ಡಿ ಬಾಸ್ ಪತ್ನಿ; ಇನ್ಸ್ಟಾಗ್ರಾಂನಲ್ಲಿ ಡಿಪಿ ತೆಗೆದು ದರ್ಶನ್ ರನ್ನು ಅನ್ ಫಾಲೋ ಮಾಡಿದ ವಿಜಯಲಕ್ಷ್ಮೀ

spot_img
- Advertisement -
- Advertisement -

ಬೆಂಗಳೂರು:ತಮ್ಮ ಅಭಿಮಾನಿಯನ್ನೇ ಕೊಲೆ ಮಾಡಿದ ಪ್ರಕರಣದಲ್ಲಿ ನಟ ಡಿ ಬಾಸ್ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಸೇರಿ 13 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಪತಿ ಕೆಲಸದಿಂದ ಪತ್ನಿ ವಿಜಯಲಕ್ಷ್ಮೀ ಆಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ದರ್ಶನ್ ಸೇರಿ ಎಲ್ಲರನ್ನೂ ಪತ್ನಿ ವಿಜಯಲಕ್ಷ್ಮಿ ಅನ್​ಫಾಲೋ ಮಾಡಿದ್ದಾರೆ.ಈ ಮೊದಲು ಅವರು ದರ್ಶನ್​ನ ಫಾಲೋ ಮಾಡುತ್ತಿದ್ದ ವಿಜಯಲಕ್ಷ್ಮಿ ಬೇಸರದಿಂದ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಜೊತೆಗೆ ಇನ್​ಸ್ಟಾಗ್ರಾಮ್ ಡಿಪಿಯನ್ನು ಕೂಡ ತೆಗೆದು ಹಾಕಿದ್ದಾರೆ.

ವಿಜಯಲಕ್ಷ್ಮಿ ಮತ್ತು ಪವಿತ್ರಾಗೌಡರವರ ಮಧ್ಯೆ ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆದಿತ್ತು.ಈ ಹಿಂದೆ ಪವಿತ್ರಾ ಗೌಡ ದರ್ಶನ್ ಜೊತೆ ಇರೋ ಫೋಟೋ ಹಂಚಿಕೊಂಡಿದ್ದರು. ’10 ವರ್ಷಗಳ ಸಂಬಂಧ’ ಎಂದು ಟ್ಯಾಗ್​ಲೈನ್ ನೀಡಿದ್ದರು. ಇದನ್ನು ವಿಜಯಲಕ್ಷ್ಮಿ ಅವರಿಗೆ ಸೋಷಿಯಲ್ ಮೀಡಿಯಾ ಮೂಲಕವೇ ವಾರ್ನ್ ಮಾಡಿದ್ದರು.

- Advertisement -
spot_img

Latest News

error: Content is protected !!