- Advertisement -
- Advertisement -
ಶಿವಮೊಗ್ಗ: ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಅಧಿಕಾರಿ ಜ್ಯೋತಿ ಅವರು ಕಾಂಗ್ರೆಸ್ ಎಂಎಲ್ಎ ಪುತ್ರ ಬೆದರಿಕೆ ಹಾಕಿದ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯಲ್ಲಿ ಡಿವೈಎಸ್ಪಿಗೆ ದೂರು ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗಾಗಲೇ ಕಾಂಗ್ರೆಸ್ ಎಂಎಲ್ಎ ಪುತ್ರನ ಪ್ರಕರಣಕ್ಕೆ ಸಂಬಂಧಿಸಿದಮತೆ ದೂರು ದಾಖಲು ಮಾಡಿದ್ದೇನೆ. ಅವತ್ತು ದಾಳಿ ಮಾಡಿದಾಗ ಏನೇನು ಸಮಸ್ಯೆ ಆಗಿತ್ತೋ, ಆ ಬಗ್ಗೆ ದೂರು ನೀಡಿದ್ದು, ದಾಳಿ ಮಾಡಿದ ಸಂದರ್ಭದಲ್ಲಿ ಎಂಎಲ್ಎ ಪುತ್ರ ನಮ್ಮ ಮೇಲೆ ಗಾಡಿ ಹತ್ತಿಸ್ರೋ ಎಂದೂ ಹೇಳುತ್ತಿದ್ದರು. ಈ ಮಾತು ಕೇಳಿ ನನಗೆ ಭಯವಾಯಿತು. ಆ ಕ್ಷಣದಲ್ಲಿ ಫೋನ್ ಕಾಲ್ ಕೂಡ ಬಂತು. ಅಲ್ಲಿಂದ ಯಾಕೋ ಸರಿಯಾಗುವುದಿಲ್ಲ ಎಂದು ವಾಪಾಸ್ ಬಂದೆ. ದಾಳಿ ವೇಳೆ ಬೆದರಿಕೆ ಸಹ ಬಂತು. ಅಧಿಕಾರಿಗಳು ಸಹ ನನಗೆ ಬೆಂಬಲ ನೀಡಿದ್ದಾರೆ,’ ಎಂದು ಅಧಿಕಾರಿ ಜ್ಯೋತಿ ಅವರು ತಿಳಿಸಿದ್ದಾರೆ.
- Advertisement -